
ಎಚ್.ಡಿ. ಕುಮಾರಸ್ವಾಮಿ – ಶಾಸಕ ಕೆ.ಎಂ.ಉದಯ
ಮದ್ದೂರು: ‘ಮಾಜಿ ಸಂಸದ ಪ್ರಜ್ಜಲ್ ರೇವಣ್ಣ ಜೈಲು ಪಾಲಾಗಲು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರೇ ಕಾರಣ’ ಎಂದು ಶಾಸಕ ಕೆ.ಎಂ.ಉದಯ ಆರೋಪ ಮಾಡಿದರು.
ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿ, ‘ನಿಖಿಲ್ ಕುಮಾರಸ್ವಾಮಿ ಅವರನ್ನು ಜನ 3 ಬಾರಿ ತಿರಸ್ಕರಿದ್ದಾರೆ. ಅವರು ಏನೂ ಆಗಲಿಲ್ಲವಲ್ಲ ಎಂಬ ಕಾರಣಕ್ಕೆ ಅವರ ಅಣ್ಣನ ಮಗ ಪ್ರಜ್ಜಲ್ ರೇವಣ್ಣ ಅವರನ್ನೇ ಕುಮಾರಸ್ವಾಮಿ ಜೈಲಿಗೆ ಹಾಕಿಸಿದರು’ ಎಂದು ದೂರಿದರು.
‘ಪ್ರಜ್ವಲ್ ಜನಪ್ರಿಯತೆ ಸಹಿಸದೆ ಕುಮಾರಸ್ವಾಮಿ ಅವರು ಚುನಾವಣಾ ವೇಳೆ ಪೆನ್ ಡ್ರೈವ್‌ಗಳನ್ನು ಸೃಷ್ಟಿಸಿ ಜೈಲಿಗೆ ಹಾಕಿಸಿದರು. ಮಾಜಿ ಪ್ರಧಾನಿ ದೇವೇಗೌಡರು ಮನಸು ಮಾಡಿದ್ದರೆ ಹೊರಗೆ ತರಬಹುದಿತ್ತು. ಆದರೆ, ಕುಮಾರಸ್ವಾಮಿ ಕುಮ್ಮಕ್ಕಿನಿಂದ ಪ್ರಜ್ಜಲ್ ರೇವಣ್ಣ ಜೈಲಿನಿಂದ ಹೊರ ಬರಲು ಆಗುತ್ತಿಲ್ಲ’ ಎಂದು ಆರೋಪಿಸಿದರು.
ಕುಮಾರಸ್ವಾಮಿ ಅವರು ಮದ್ದೂರಿಗೆ ಬಂದು ‘ಗೆಜ್ಜಲಗೆರೆಯ ಜನರನ್ನು ಪ್ರತಿಭಟನೆಗೆ ಪ್ರಚೋದನೆ ನೀಡುತ್ತಿರುವುದು ಎಷ್ಟು ಸರಿ’ ಎಂದು ಪ್ರಶ್ನಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.