ADVERTISEMENT

ಕೆ.ಆರ್.ಪೇಟೆ | ವಸಂತಪುರದಲ್ಲಿ ಕೋತಿಗಳ ಹಾವಳಿ: ಗ್ರಾಮಸ್ಥರು ಹೈರಾಣು

​ಪ್ರಜಾವಾಣಿ ವಾರ್ತೆ
Published 25 ಜುಲೈ 2025, 2:07 IST
Last Updated 25 ಜುಲೈ 2025, 2:07 IST
ಕೆ.ಆರ್.ಪೇಟೆ ತಾಲ್ಲೂಕಿನ ವಸಂತಪುರ ಗ್ರಾಮದಲ್ಲಿ ಕೋತಿಗಳ ಹಾವಳಿ ಹೆಚ್ಚಾಗಿದ್ದು ಅವುಗಳನ್ನು ಹಿಡಿಯುವಂತೆ ಒತ್ತಾಯಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು
ಕೆ.ಆರ್.ಪೇಟೆ ತಾಲ್ಲೂಕಿನ ವಸಂತಪುರ ಗ್ರಾಮದಲ್ಲಿ ಕೋತಿಗಳ ಹಾವಳಿ ಹೆಚ್ಚಾಗಿದ್ದು ಅವುಗಳನ್ನು ಹಿಡಿಯುವಂತೆ ಒತ್ತಾಯಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು   

ಕೆ.ಆರ್.ಪೇಟೆ: ತಾಲ್ಲೂಕಿನ ವಸಂತಪುರ ಗ್ರಾಮದಲ್ಲಿ ಕೋತಿಗಳ ಹಾವಳಿ ಹೆಚ್ಚಾಗಿದ್ದು ಅವುಗಳ ಕಾಟದಿಂದ ಹೈರಾಣಗಿರುವ ಗ್ರಾಮಸ್ಥರು ಕೋತಿಗಳನ್ನು ಹಿಡಿಯುವಂತೆ ಆಗ್ರಹಿಸಿ ಭಾನುವಾರ ಪ್ರತಿಭಟನೆ ನಡೆಸಿದರು.

ಕೆಲವು ದಿನಗಳ ಹಿಂದೆ ಮೇಲುಕೋಟೆ ಅರಣ್ಯಪ್ರದೇಶದಿಂದ ಹೀಂಡಾಗಿ ಬಂದ ಕೋತಿಗಳು ಗ್ರಾಮದಲ್ಲಿ ಬೀಡು ಬಿಟ್ಟಿದ್ದವು. ಬೀಡು ಬಿಟ್ಟ ಕೋತಿಗಳು ರೈತರ ಬೆಳೆ ಹಾಳು ಮಾಡುತ್ತಿರುವುದಲ್ಲದೆ ವಾಸದ ಮನೆಯೊಳಗೆ ನುಗ್ಗಿ, ಸಿಕ್ಕ ಸಿಕ್ಕ ವಸ್ತುಗಳನ್ನು ಹೊತ್ತೊಯ್ಯುವುದು, ಹಾಳುಮಾಡುವುದನ್ನು ಆರಂಭಿಸಿವೆ. ಶಾಲಾ ಕೊಠಡಿ, ಅಂಗನವಾಡಿ ಕೊಠಡಿಯೊಳಗೆ ನುಗ್ಗಿ ದಾಳಿ ಮಾಡಿವೆ. ಇದರಿಂದ ವಿದ್ಯಾರ್ಥಿಗಳು ಶಾಲೆಗೆ ಹೋಗಲು ಹೆದರುವಂತಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.

ಅರಣ್ಯ ಇಲಾಖೆಯವರು ಈ ಬಗ್ಗೆ ಕ್ರಮ ವಹಿಸಿ ಕೋತಿಗಳನ್ನು ಸೆರೆ ಹಿಡಿಯಬೇಕೆಂದು ಗ್ರಾಮಸ್ಥರು ಆಗ್ರಹಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.