ADVERTISEMENT

ಪುನೀತ್ ಸಮಾಜಸೇವೆ ಮೈಗೂಡಿಸಿಕೊಳ್ಳಿ

ರಾಜರತ್ನ ಸಮಾಜ ಸೇವಾ ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2025, 11:45 IST
Last Updated 20 ಮಾರ್ಚ್ 2025, 11:45 IST
ಕೆ.ಆರ್.ಪೇಟೆಯಲ್ಲಿ ಜಯಕರ್ನಾಟಕ ಸಂಘಟನೆಯವರು ಪುನೀತ್ ರಾಜಕುಮಾರ್ ಜನ್ಮದಿನದ ಪ್ರಯುಕ್ತ ವಿವಿಧ ಕ್ಷೇತ್ರಗಳ ಸಾಧಕರಿಗೆ ಕರ್ನಾಟಕ ರಾಜರತ್ನ ಸಮಾಜ ಸೇವಾ ಪ್ರಶಸ್ತಿ ಪ್ರದಾನ ಮಾಡಲಾಯಿತು
ಕೆ.ಆರ್.ಪೇಟೆಯಲ್ಲಿ ಜಯಕರ್ನಾಟಕ ಸಂಘಟನೆಯವರು ಪುನೀತ್ ರಾಜಕುಮಾರ್ ಜನ್ಮದಿನದ ಪ್ರಯುಕ್ತ ವಿವಿಧ ಕ್ಷೇತ್ರಗಳ ಸಾಧಕರಿಗೆ ಕರ್ನಾಟಕ ರಾಜರತ್ನ ಸಮಾಜ ಸೇವಾ ಪ್ರಶಸ್ತಿ ಪ್ರದಾನ ಮಾಡಲಾಯಿತು   

ಕೆ.ಆರ್.ಪೇಟೆ: ಪಟ್ಟಣದ ಪುರಸಭಾ ಮೈದಾನದಲ್ಲಿ ಪುನೀತ್ ರಾಜಕುಮಾರ್ ಅವರ 50ನೇ ವರ್ಷದ ಜನ್ಮದಿನದ ಪ್ರಯುಕ್ತ ಜಯಕರ್ನಾಟಕ ಸಂಘಟನೆಯ ನೇತೃತ್ವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ವಿವಿಧ ಕ್ಷೇತ್ರಗಳ ಸಾಧಕರು ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸುವ ಕಾರ್ಯಕ್ರಮ ಸಡಗರದಿಂದ ನಡೆಯಿತು.

ಸಂಘಟನೆಯ ರಾಜ್ಯ ಕಾರ್ಯದರ್ಶಿ ವಿಜಯಗೌಡ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ‘ಪುನೀತ್ ರಾಜಕುಮಾರ್ ಅವರು ತಮ್ಮ ಜೀವಿತದುದ್ದಕ್ಕೂ ಬಡವರು ಹಾಗೂ ಆರ್ಥಿಕವಾಗಿ ಸಂಕದಲ್ಲಿರುವ ಜನರ ನೋವು ನಲಿವುಗಳಿಗೆ ಸ್ಪಂದಿಸಿ ಕೆಲಸ ಮಾಡಿ ದೇಶಾದ್ಯಂತ ಕೋಟ್ಯಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ಹೀಗಾಗಿ ಅವರು ಸತ್ತ ನಂತರವೂ ಜೀವಂತವಾಗಿದ್ದಾರೆ. ಯುವಕರು ಅವರ ಆದರ್ಶ ಗುಣಗಳನ್ನು ಅಳವಡಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ರಾಜ್ಯ ಆರ್.ಟಿ.ಒ ಅಧಿಕಾರಿಗಳ ಸಂಘದ ರಾಜ್ಯ ಅಧ್ಯಕ್ಷ ಮಲ್ಲಿಕಾರ್ಜುನ್, ಜಯಕರ್ನಾಟಕ ಸಂಘಟನೆ ಮೈಸೂರು ನಗರ ಘಟಕದ ಅಧ್ಯಕ್ಷ ಹರ್ಷ, ಜಿಲ್ಲಾ ಉಪಾಧ್ಯಕ್ಷ ಕಾಂತರಾಜು, ತಾಲ್ಲೂಕು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಆನಂದಕುಮಾರ್, ಪುರಸಭಾ ಮಾಜಿ ಸದಸ್ಯ ಕೆ.ಬಿ. ನಂದೀಶ್, ಪೊಲೀಸ್ ಇನ್‌ಸ್ಪೆಕ್ಟರ್ ಸುಮಾರಾಣಿ, ಕಿಕ್ಕೇರಿ ಠಾಣೆಯ ಇನ್‌ಪೆಕ್ಟರ್ ರೇವತಿ, ಪೊಲೀಸ್ ಕುಮಾರ್, ಪ್ರಗತಿಪರ ಕೃಷಿಕ ವಡಕಹಳ್ಳಿ ಮಂಜಣ್ಣ, ಸೋಮಶೇಖರ್ ಭಾಗವಹಿಸಿದ್ದರು.

ADVERTISEMENT

ಕರ್ನಾಟಕ ರಾಜರತ್ನ ಸಮಾಜ ಸೇವಾ ಪ್ರಶಸ್ತಿ ಪುರಸ್ಕೃತರು:

ಬಿ‌ಎಂಟಿಸಿ ಬಸ್ ಮಹಿಳಾ ಚಾಲಕಿ ಪ್ರೇಮ, ಪೊಲೀಸ್ ಇನ್‌ಸ್ಪೆಕ್ಟರ್‌ಗಳಾದ ರೇವತಿ, ಸುಮಾರಾಣಿ, ದಲಿತ ಹೋರಾಟಗಾರ್ತಿ ಭೀಮಪುತ್ರಿ ಪವಿತ್ರ, ಮಹಿಳಾ ಹೋರಾಟಗಾರ್ತಿ ವಿಜಯಗೌಡ, ನಿಮಿಶಾಂಬ ದೇವಾಲಯದ ಸಿ.ಜೆ.ಕೃಷ್ಣ, ಅಥ್ಲೆಟಿಕ್ಷ್ ಚಾಂಪಿಯನ್ ಚಿಕ್ಕಾಡೆ ರಕ್ಷಿತ್, ಜಾನಪದ ಕಲಾವಿದ ಶಂಭುನಹಳ್ಳಿ ಮಂಜುನಾಥ್, ಕಂಠದಾನ ಕಲಾವಿದ ಸಣ್ಣರಾಮೇಗೌಡ, ಪ್ರಗತಿಪರ ರೈತ ವಡಕಹಳ್ಳಿ ಮಂಜುನಾಥ್, ಆಯುರ್ವೇದ ತಜ್ಞೆ ಪಿ.ಎಸ್. ಶೃತಿ, ಡ್ರಾಮ ಮಾಸ್ಟರ್ ಚಿಕ್ಕಗಾಡಿಗನಹಳ್ಳಿ ನಾರಾಯಣ, ಗ್ರಾಮೀಣ ಅಂಗವಿಕಲ ಕಾರ್ಯಕರ್ತೆ ಧನಲಕ್ಷ್ಮೀ, ಮಾತೃಭೂಮಿ ಅನಾಥಾಶ್ರಮದ ವ್ಯವಸ್ಥಾಪಕ ಜೈಹಿಂದ್ ನಾಗಣ್ಣ, ವಿಶ್ರಾಂತ ಯೋಧ ಭೀಮಪ್ಪ, ಚಾಲಕ ಎಚ್.ಎನ್.ನಟೇಶ, ಪ್ರತಿಭಾವಂತ ವಿದ್ಯಾರ್ಥಿಗಳಾದ ಹಿತೈಷಿ, ಹರ್ಷಹಾಗೂ ಎಚ್.ವೈ. ಪೂಜಾ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.