ADVERTISEMENT

ಮದ್ದೂರು: ಫೆ.1ರಂದು ರೇಣುಕಾ ಎಲ್ಲಮ್ಮ ದೇವಿ ಜಾತ್ರೆ

​ಪ್ರಜಾವಾಣಿ ವಾರ್ತೆ
Published 26 ಜನವರಿ 2026, 19:01 IST
Last Updated 26 ಜನವರಿ 2026, 19:01 IST
ರೇಣುಕಾ ಎಲ್ಲಮ್ಮ ವಿಗ್ರಹ
ರೇಣುಕಾ ಎಲ್ಲಮ್ಮ ವಿಗ್ರಹ   

ಮದ್ದೂರು (ಮಂಡ್ಯ ಜಿಲ್ಲೆ): ಪಟ್ಟಣದ ಹೊಳೆ ಬೀದಿಯಲ್ಲಿರುವ ರೇಣುಕಾ ಎಲ್ಲಮ್ಮದೇವಿ 54ನೇ ವರ್ಷದ ಜಾತ್ರಾ ಮಹೋತ್ಸವ ಹಾಗೂ 27ನೇ ವರ್ಷದ ಮಹಾಚಂಡಿಕಾ ಯಾಗದ ಕಾರ್ಯಕ್ರಮಗಳು ಜ.31ರಿಂದ ಫೆ.2ರವರೆಗೆ ನಡೆಯಲಿವೆ.

31ರಂದು ಗಣಪತಿ ಪೂಜೆ, ಕಳಶ ಸ್ಥಾಪನೆ ಸೇರಿ ವಿವಿಧ ಧಾರ್ಮಿಕ ಕಾರ್ಯಗಳು ನಡೆಯಲಿವೆ. ಫೆ.1ರಂದು ಬೆಳಿಗ್ಗೆ 8.30ಕ್ಕೆ ಮಹಾಚಂಡಿಕಾ ಯಾಗ ಆರಂಭ
ವಾಗಲಿದ್ದು, ಬೆಳಿಗ್ಗೆ 11.30ಕ್ಕೆ ಮಹಾಪೂರ್ಣಾಹುತಿ ನಂತರ ಸುಹಾಸಿನಿ ಆರಾಧನೆ ಹಾಗೂ ಕನ್ನಿಕಾ ಆರಾಧನೆ ನಡೆಯಲಿದೆ. 

ಮಧ್ಯಾಹ್ನ 12.30ಕ್ಕೆ ಮಹಾ ಮಂಗಳಾರತಿ, ಮಹಿಳೆಯರಿಂದ ತಂಬಿಟ್ಟಿನ ಆರತಿ ನಡೆಯಲಿದೆ. ಮಧ್ಯಾಹ್ನ 1ರಿಂದ ದೇವಸ್ಥಾನದ ಆವರಣದಲ್ಲಿ ‘ಅನ್ನ ಸಂತರ್ಪಣೆ’ ಏರ್ಪಡಿಸಲಾಗಿದೆ. 

ADVERTISEMENT

ಸಂಜೆ 4.15ರಿಂದ ನಿಂಬೆಹಣ್ಣಿನ ದೀಪದ ಆರತಿ ಮತ್ತು ಉಯ್ಯಾಲೋತ್ಸವ ನಡೆಯಲಿದೆ. ಸಂಜೆ 6.30ಕ್ಕೆ ಮುತ್ತಿನ ಪಲ್ಲಕ್ಕಿಯಲ್ಲಿ ಪುಷ್ಪಮಾಲೆಗಳಿಂದ ಅಲಂಕೃತವಾದ ದೇವಿಯ ಮೆರವಣಿಗೆಯನ್ನು ಏರ್ಪಡಿಸಲಾಗಿದೆ. 

‘ಮುತ್ತಿನ ಪಲ್ಲಕ್ಕಿ’ ಮೆರವಣಿಗೆಯಲ್ಲಿ ತಿರುಪತಿಯ ಮಂಜು ಬಾಲಾಜಿ ಅವರ ವಾದ್ಯಗೋಷ್ಠಿ, ಮಂಗಳೂರಿನ ಯಕ್ಷಗಾನ, ಕೇರಳದ ಚಂಡೆ ಮೇಳ, ತಮಿಳುನಾಡಿನ ಬ್ಯಾಂಡ್ ಸೆಟ್, ಪೂಜಾ ಕುಣಿತ, ತಮಟೆ, ನಗಾರಿ ಸೇರಿ ಹಲವು ಜಾನಪದ ಕಲಾತಂಡಗಳು ಭಾಗವಹಿ‌ಸಲಿವೆ.

ಫೆ.2ರಂದು ಬೆಳಿಗ್ಗೆ 6ಕ್ಕೆ ದೇವಿಯನ್ನು ದೇವಸ್ಥಾನದ ಮೂಲಸ್ಥಾನಕ್ಕೆ ಆಹ್ವಾನಿಸಿ, ಬೆಳಿಗ್ಗೆ 8.30ಕ್ಕೆ ಕ್ಷೀರಾಭಿಷೇಕ, ಅಲಂಕಾರ ನಡೆಯಲಿದೆ. ಮಧ್ಯಾಹ್ನ 12.30ಕ್ಕೆ ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗವಾಗಲಿದೆ ಎಂದು ಧರ್ಮದರ್ಶಿ ಶ್ರೀನಿವಾಸ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.