ಮಂಡ್ಯ: ‘ಗೃಹಸಚಿವ ಪರಮೇಶ್ವರ್ ಅವರೇ ಸಂವಿಧಾನ ಉಳಿಯಬೇಕು. ಅದರ ಜಾಗದಲ್ಲಿ ಷರಿಯತ್ ಕೂರಬಾರದು. ಈಗ ಎಚ್ಚೆತ್ತುಕೊಂಡ್ರೆ ನಮ್ಮ–ನಿಮ್ಮ ಮಕ್ಕಳು ಉಳಿದುಕೊಳ್ಳುತ್ತಾರೆ. ನಾವು ಹೇಗೋ ಇನ್ನು 20–25 ವರ್ಷ ಜಗಳ ಮಾಡಿಕೊಂಡು ಆಯಸ್ಸು ಮುಗಿಸುತ್ತೇವೆ. ನಮ್ಮ ಮೊಮ್ಮಕ್ಕಳ ಕಾಲಕ್ಕೆ ಇಂಡಿಯಾ ಇಂಡಿಯಾವಾಗಿ ಉಳೀಬೇಕು. ಇದಕ್ಕೆ ಜಾಗೃತಿ ಅಗತ್ಯ’ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಹೇಳಿದರು.
ಮದ್ದೂರಿನಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿ, ‘ಸತ್ಯ ಹೇಳಿದ್ರೆ ಎಫ್‌ಐಆರ್ ಹಾಕುತ್ತಾರೆ ಅಂತ ಸತ್ಯ ಹೇಳೋದನ್ನು ನಿಲ್ಲಿಸೋಕೆ ಆಗುತ್ತಾ? ಗಣಪತಿ ಮೂರ್ತಿ ಮೇಲೆ ಕಲ್ಲು ಹೊಡೆದ್ರೆ ಸಹಿಸೋಕೆ ಆಗುತ್ತಾ? ಅವರ ಮೇಲೆ ಕಲ್ಲು ಹೊಡೆದ್ರೆ ಸಹಿಸಿಕೊಳ್ಳುತ್ತಾರಾ? ಸಹಿಸಿಕೊಳ್ಳೊದಾದ್ರೆ ನಮಗೆ ಸಹನೆಯ ಪಾಠ ಮಾಡಲಿ’ ಎಂದರು.
‘ಮುಸ್ಲಿಮರ ದುರ್ಬೋಧನೆಯನ್ನು ನಿಲ್ಲಿಸದಿದ್ರೆ ಶಾಂತಿ ಹೇಗೆ ನೆಲೆಸುತ್ತೆ? ಮುಸ್ಲಿಮರ ಮತೀಯ ಗ್ರಂಥಗಳು ಕಲ್ಲು ಹೊಡೆಯುವಂತೆ ಬೋಧನೆ ಮಾಡುತ್ತವೆ. ಅಲ್ಲಿ ಸಹಬಾಳ್ವೆಗೆ ಜಾಗವಿಲ್ಲ. ಈ ಬಗ್ಗೆ ಎಸ್‌ಐಟಿ ಅಧ್ಯಯನ ನಡೆಸಲಿ. ನಮ್ಮ ಗ್ರಂಥ ಅಧ್ಯಯನ ಮಾಡಿದ್ರೆ ದೇವರಾಗುತ್ತಾರೆ, ಅವರ ಗ್ರಂಥ ಅಧ್ಯಯನ ಮಾಡಿದ್ರೆ ಬಿನ್ ಲಾಡೆನ್ ಆಗುತ್ತಾರೆ’ ಎಂದು ಆರೋಪಿಸಿದರು.
‘ಈ ನೆಲದ ಮದ್ದೂರಮ್ಮ, ಗಣೇಶ, ಶಿವನಿಗೆ ಜಾಗ ಇಲ್ಲ. ಅವರ ಬಳಿ ‘ಅಲ್ಲಾ’ ಒಬ್ಬನಿಗೇ ಜಾಗ. ಉಳಿದೆಲ್ಲಾ ದೇವರುಗಳನ್ನು ದ್ವೇಷಿಸುವುದೇ ಸಮಸ್ಯೆಗೆ ಕಾರಣ. ಅವರು ಮದ್ದೂರಿನಲ್ಲಿ ಮೂರು ಪರ್ಸೆಂಟ್ ಇದ್ದ ಕಾರಣ ತಪ್ಪಾಯ್ತು ಅಂದ್ರು. ಮೂವತ್ತು ಪರ್ಸೆಂಟ್ ಆದಾಗ ನಾವು ಮಾಡಿದ್ದೇ ಸರಿ ಅಂತಾರೆ’ ಎಂದು ದೂರಿದರು.
ಮದ್ದೂರಿನಲ್ಲಿ ಪ್ರಗತಿಪರ ಸಂಘನೆಗಳು ರ್‍ಯಾಲಿ ನಡೆಸುವ ವಿಚಾರಕ್ಕೆ ಪ್ರತಿಕ್ರಿಯಿಸಿ, ‘ಮನೆ ಹಾಳು ಮಾಡೋದು, ದ್ವೇಷಿಸೋರ ಪರ ಕೆಲಸ ಮಾಡೋದು ಪ್ರಗತಿಪರರ ಕೆಲಸವಲ್ಲ. ಪ್ರಗತಿಪರರ ಜೊತೆ ಚರ್ಚೆಗೆ ನಾನು ಸಿದ್ಧನಿದ್ದೇನೆ ಬೇಕಿದ್ದರೆ ಬರಲಿ. ನಾವು ರಾಜಕೀಯ ಮಾಡೋಕೆ ಮದ್ದೂರಿಗೆ ಬಂದಿರಲಿಲ್ಲ. ಹಿಂದೂ ಸಮಾಜದ ರಕ್ಷಣೆಗಾಗಿ ಬಂದಿದ್ದೆವು. ಅಲ್ಲಿ ನಡೆದ ಪ್ರತಿಭಟನೆ ಜನಾಕ್ರೋಶದ ಪ್ರತೀಕ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.