ADVERTISEMENT

ಸಹೋದರನಿಗೆ ಕ್ಯಾನ್ಸರ್: ಹಣ ಸಹಾಯ ಬೇಡಿದ ಸಹೋದರಿ

​ಪ್ರಜಾವಾಣಿ ವಾರ್ತೆ
Published 2 ಜನವರಿ 2026, 6:52 IST
Last Updated 2 ಜನವರಿ 2026, 6:52 IST
ದಿಲೀಪ್
ದಿಲೀಪ್   

ಮೇಲುಕೋಟೆ: ‘ರಕ್ತದ ಕ್ಯಾನ್ಸರ್‌ನಿಂದ ಬಳಲುತ್ತಿರುವ ನನ್ನ ತಮ್ಮ ದಿಲೀಪ್ ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದಾನೆ. ಕೀಮೋಥೆರಪಿ ಹಾಗೂ ಬೋನ್ ಮ್ಯಾರೋ ಥೆರಪಿ ಮಾಡಿಸಬೇಕಿದೆ. ಶಸ್ತ್ರ ಚಿಕಿತ್ಸೆಗೆ ₹30 ಲಕ್ಷದಿಂದ ₹40 ಲಕ್ಷ ಅವಶ್ಯ ಇದೆ. ದಯವಿಟ್ಟು ಸಹಾಯ ಮಾಡಿ ಜೀವ ಉಳಿಸಿ’ ಎಂದು ಸಹೋದರಿ ದೀಪು ಬೇಡಿಕೊಂಡಿದ್ದಾರೆ.

ಇಲ್ಲಿನ ಬಳ್ಳಿಘಟ್ಟ ಅಂಬೇಡ್ಕರ್ ಕಾಲೊನಿಯಲ್ಲಿ ವಾಸವಿರುವ ಇವರು ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಸಹೋದರ ಇತ್ತೀಚೆಗೆ ಅನಾರೋಗ್ಯಕ್ಕೆ ಸಿಲುಕಿದ್ದ. ಕಂಗೇರಿ ಬಿಜಿಎಸ್ ಆಸ್ವತ್ರೆಯಲ್ಲಿ ತಪಸಾಣೆ ಮಾಡಿಸಿದಾಗ ಕ್ಯಾನ್ಸರ್ ಇರುವ ವಿಚಾರ ತಿಳಿದಿದೆ. ಈಗಾಗಲೇ ₹ 5 ಲಕ್ಷದವರೆಗೆ ಖರ್ಚು ಮಾಡಲಾಗಿದೆ. ಮನೆ ಬಿಟ್ಟರೆ, ಜೀವನಕ್ಕೆ ಬೇರೆ ಏನೂ ಆಧಾರವಿಲ್ಲ. ನಮ್ಮ ತಂದೆ ಅನಾರೋಗ್ಯದಿಂದ ಹಾಸಿಗೆ ಹಿಡಿದ್ದಾರೆ’ ಎಂದು ಸಮಸ್ಯೆ ತೋಡಿಕೊಂಡಿದ್ದಾರೆ. ಚಿಕತ್ಸೆಗೆ ನೆರವು ನೀಡುವವರು ಮೊ: 9945842064 ಸಂಪರ್ಕಿಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT