ಶ್ರೀರಂಗಪಟ್ಟಣ (ಮಂಡ್ಯ ಜಿಲ್ಲೆ): ತಾಲ್ಲೂಕಿನ ಬೆಳಗೊಳ ಸಮೀಪದ ಭಂಭಂ ಸರ್ವಧರ್ಮ ಆಶ್ರಮದ ಬಳಿ ಭಾನುವಾರ ಸಂಜೆ ಕಾವೇರಿ ನದಿ ದಡದಲ್ಲಿ ನಿಂತು ವಿಡಿಯೊ ಮಾಡುತ್ತಿದ್ದ ವ್ಯಕ್ತಿಯೊಬ್ಬರು ಆಯತಪ್ಪಿ ನದಿಗೆ ಬಿದ್ದು ಕೊಚ್ಚಿಕೊಂಡು ಹೋಗಿದ್ದಾರೆ.
ಹಾಸನ ಜಿಲ್ಲೆ ಅರಕಲಗೂಡು ತಾಲ್ಲೂಕು ಉಲ್ಲಂಗಾಲ ಗ್ರಾಮದ ಮಲ್ಲೇಶ್ ಅವರ ಮಗ ಮಹೇಶ್ (30) ಕೊಚ್ಚಿ ಹೋದವರು. ಅವರು ಆಟೊರಿಕ್ಷಾ ಚಾಲಕರಾಗಿದ್ದರು.
ಅಗ್ನಿಶಾಮಕ ಠಾಧಿಕಾರಿ ಅಂಬರೀಷ್ ಎನ್. ಉಪ್ಪಾರ, ಸಹಾಯಕ ಅಧಿಕಾರಿ ಕೆ.ಪಿ. ಪರಮೇಶ್ ಅವರ ತಂಡ ಸೋಮವಾರ ಮಹೇಶ್ ಅವರಿಗಾಗಿ ಶೋಧ ಕಾರ್ಯ ನಡೆಸಿತು. ಕೆಆರ್‌ಎಸ್ ಜಲಾಶಯದಿಂದ 23ಸಾವಿರ ಕ್ಯೂಸೆಕ್‌ಗೂ ಹೆಚ್ಚು ನೀರನ್ನು ನದಿಗೆ ಬಿಟ್ಟಿರುವುದರಿಂದ, ನೀರಿನ ಸೆಳೆತ ಹೆಚ್ಚಾಗಿದ್ದು ಪತ್ತೆ ಕಾರ್ಯಕ್ಕೆ ತೊಡಕಾಗಿದೆ ಎಂದು ಕೆಆರ್‌ಎಸ್ ಠಾಣೆ ಪಿಎಸ್‌ಐ ರಮೇಶ್ ಕರ್ಕಿಕಟ್ಟಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.