ಒಡೆದ ಸಿಡಿಎಸ್ ನಾಲೆ ಏರಿ
ಶ್ರೀರಂಗಪಟ್ಟಣ: ಗುರುವಾರ ರಾತ್ರಿ ಸುರಿದ ಭಾರಿ ಮಳೆಗೆ ತಾಲ್ಲೂಕಿನ ದರಸಗುಪ್ಪೆ ಬಳಿ ಚಿಕ್ಕದೇವರಾಯಸಾಗರ (ಸಿಡಿಎಸ್) ನಾಲೆಯ ಏರಿ ಒಡೆದಿದೆ.
ನಾಲೆಯ 21 ನೇ ಮೈಲಿಯಲ್ಲಿ ನಾಲೆಯ ಏರಿ 15 ಅಡಿಗಳಷ್ಟು ಒಡೆದಿದ್ದು, ಕೃಷಿ ಭೂಮಿಗೆ ನೀರು ನುಗ್ಗಿದೆ. ನಾಲೆ ಪಕ್ಕದ ಕೃಷಿ ಭೂಮಿ ಬೆಳೆ ಸಹಿತ ಕೊಚ್ಚಿ ಹೋಗಿದೆ. ಅಡಿಕೆ, ತೆಂಗು. ಕಬ್ಬು, ಭತ್ತದ ಬೆಳೆಗಳು ಜಲಾವೃತವಾಗಿದ್ದು, ಕೆಲವೆಡೆ ಬೆಳೆಗಳ ಮೇಲೆ ಮಣ್ಣು ಬಿದ್ದಿದೆ.
ಕೆನ್ನಾಳು ಗ್ರಾಮದ ಪಾಪಣ್ಣ, ಮಹದೇವು, ಮರಿಸ್ವಾಮಿಗೌಡ, ನಾಗೇಂದ್ರು, ಸಂಜೀವ ಇತರರ ಕೃಷಿ ಜಮೀನಿನ ಮೇಲೆ ನೀರು ಹರಿದಿದೆ.
ನಾಲೆಯ ನೀರಿಗೆ ಮಳೆ ನೀರು ಕೂಡ ಸೇರಿದ್ದರಿಂದ ಈ ಅನಾಹುತ ಘಟಿಸಿದೆ. ಸ್ಥಳಕ್ಕೆ ನೀರಾವರಿ ಇಲಾಖೆ ಎಂಜಿನಿಯರ್'ಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.