ಹಲಗೂರು: ಸಮೀಪದ ಹಾಡ್ಲಿ ಗ್ರಾಮದ ರತ್ನಮ್ಮ ಕೋಂ. ಲಿಂಗರಾಜು ಅವರ ಮನೆಯಲ್ಲಿ ಕಳ್ಳರು ಮನೆಯ ಬೀಗ ಹೊಡೆದು ನಗದು ಮತ್ತು ಚಿನ್ನಾಭರಣಗಳನ್ನು ದೋಚಿದ್ದಾರೆ.
ಫೆ.18ರಂದು ರತ್ನಮ್ಮ ಅವರು ತಮ್ಮ ತವರು ಮನೆಯಾದ ಮಾಗನೂರಿಗೆ ತೆರಳಿದ್ದರು. ಫೆ.22ರಂದು ಮಧ್ಯಾಹ್ನ ಮನೆಗೆ ವಾಪಸ್ಸಾದಾಗ ಕಳ್ಳತನ ಮಾಡಿರುವುದು ಗೊತ್ತಾಗಿದೆ.
ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿ ಹೊಂಚು ಹಾಕಿರುವ ಕಳ್ಳರು ಮನೆಯಲ್ಲಿದ್ದ ₹55 ಸಾವಿರ ನಗದು, 3 ಗ್ರಾಂ. ಚಿನ್ನಾಭರಣ, ಎರಡು ಬೆಳ್ಳಿ ಬಟ್ಟಲು, ಒಂದು ದೇವಿಯ ಮುಖವಾಡ ಕಳ್ಳತನ ಮಾಡಿ ಪರಾರಿಯಾಗಿದ್ದಾರೆ.
ಈ ಸಂಬಂಧ ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.