ADVERTISEMENT

ನಾಗಮಂಗಲ: 180ಕ್ಕೂ ಹೆಚ್ಚು ಶಾಲಾ ಕಾಲೇಜುಗಳಿಂದ ಮಾದರಿ ಪ್ರದರ್ಶನ

ವಿಜ್ಞಾತಂ ಉತ್ಸವ- 2026, ವಸ್ತು ಪ್ರದರ್ಶನ ಸಂಪನ್ನ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2026, 2:58 IST
Last Updated 22 ಫೆಬ್ರುವರಿ 2026, 2:58 IST
ನಾಗಮಂಗಲ ತಾಲ್ಲೂಕಿನ ಆದಿಚುಂಚನಗಿರಿಯಲ್ಲಿ ನಡೆದ ವಿಜ್ಞಾತಂ 2026 ವಸ್ತುಪ್ರದರ್ಶನದಲ್ಲಿ ಆಹಾರ ಭದ್ರತೆಯಲ್ಲಿ ಕೃಷಿಯಲ್ಲಿ ಎಐ ಮತ್ತು ಐಓಟಿ ವಿಚಾರಗಳ ಕುರಿತು ರಚಿಸಲಾದ ಮಾದರಿಯಲ್ಲಿ ನಾಗಮಂಗಲ ಆದಿಚುಂಚನಗಿರಿ ಕಲಾ ವಾಣಿಜ್ಯ ಮತ್ತು ವಿಜ್ಞಾನ ಕಾಲೇಜು ಪ್ರಥಮ ಸ್ಥಾನ ಪಡೆದುಕೊಂಡಿತು
ನಾಗಮಂಗಲ ತಾಲ್ಲೂಕಿನ ಆದಿಚುಂಚನಗಿರಿಯಲ್ಲಿ ನಡೆದ ವಿಜ್ಞಾತಂ 2026 ವಸ್ತುಪ್ರದರ್ಶನದಲ್ಲಿ ಆಹಾರ ಭದ್ರತೆಯಲ್ಲಿ ಕೃಷಿಯಲ್ಲಿ ಎಐ ಮತ್ತು ಐಓಟಿ ವಿಚಾರಗಳ ಕುರಿತು ರಚಿಸಲಾದ ಮಾದರಿಯಲ್ಲಿ ನಾಗಮಂಗಲ ಆದಿಚುಂಚನಗಿರಿ ಕಲಾ ವಾಣಿಜ್ಯ ಮತ್ತು ವಿಜ್ಞಾನ ಕಾಲೇಜು ಪ್ರಥಮ ಸ್ಥಾನ ಪಡೆದುಕೊಂಡಿತು   

ನಾಗಮಂಗಲ: ತಾಲ್ಲೂಕಿನ ಆದಿಚುಂಚನಗಿರಿ ಮಠದಲ್ಲಿ ಆಯೋಜಿಸಿದ್ದ ವಿಜ್ಞಾತಂ ಉತ್ಸವ ಹಾಗೂ ವಸ್ತುಪ್ರದರ್ಶನದಲ್ಲಿ ಪಾಲ್ಗೊಂಡು ಉತ್ತಮವಾದ ಮಾಡೆಲ್‌ಗಳನ್ನು ರಚಿಸಿದ ತಂಡಗಳಿಗೆ ಬಹುಮಾನ ವಿತರಿಸಲಾಯಿತು.

ವಿಜ್ಞಾತಂ ಉತ್ಸವ ಹಾಗೂ ವಸ್ತುಪ್ರದರ್ಶನದಲ್ಲಿ ರಾಜ್ಯದ ವಿವಿಧ ಭಾಗಗಳಿಂದ 180ಕ್ಕೂ ಹೆಚ್ಚು ಶಾಲಾ ಕಾಲೇಜುಗಳು ಮಾದರಿಗಳನ್ನು ತಯಾರಿಸಿ ವಸ್ತುಪ್ರದರ್ಶನದಲ್ಲಿ ಪಾಲ್ಗೊಂಡಿದ್ದರು. ವಸ್ತುಪ್ರದರ್ಶನಕ್ಕೆ ಮಾದರಿಗಳನ್ನು ತಯಾರಿಸಲು 5 ವಿಷಯಗಳನ್ನು ನಿಗದಿಪಡಿಸಲಾಗಿತ್ತು. ಐದು ವಿಷಯಗಳನ್ನು ಆಧರಿಸಿ ರಚಿಸಲಾಗಿದ್ದ ಉತ್ತಮ ಮಾಡೆಲ್‌ಗಳಿಗೆ ಬಹುಮಾನ ವಿತರಿಸಲಾಯಿತು.

‘ವಿಜ್ಞಾನ, ಧರ್ಮ ಮತ್ತು ಆಧ್ಯಾತ್ಮಿಕತೆ’ ವಿಷಯವಾಗಿ ರಚಿಸಲ್ಪಟ್ಟ ಮಾಡೆಲ್‌ಗಳ ಪೈಕಿ, ಬೆಂಗಳೂರು ನಗರೂರಿನ ಆದಿಚುಂಚನಗಿರಿ ಆಯುರ್ವೇದಿಕ್ ಮೆಡಿಕಲ್ ಕಾಲೇಜು ಪ್ರಥಮ ಸ್ಥಾನ, ನಾಗಮಂಗಲ ಬಿಜಿ ನಗರದ ಆದಿಚುಂಚನಗಿರಿ ವೈದ್ಯಕೀಯ ಮಹಾವಿದ್ಯಾಲಯ ದ್ವಿತೀಯ ಸ್ಥಾನ, ನಾಗಮಂಗಲ ಪಟ್ಟಣದ ಎಸ್‌ಎಸಿ ಕಾಲೇಜು ತೃತೀಯ ಸ್ಥಾನ ಹಾಗೂ ಬಿಜಿ ನಗರದದ ಬಿ.ಇಡಿ ಕಾಲೇಜು ನಾಲ್ಕನೇ ಸ್ಥಾನವನ್ನು ಪಡೆಯಿತು.

ADVERTISEMENT

‘ಉನ್ನತ ಶಿಕ್ಷಣದಲ್ಲಿ ತಂತ್ರಜ್ಞಾನದ ಪಾತ್ರ’ ವಿಷಯವಾಗಿ ರಚಿತವಾದ ಮಾಡೆಲ್‌ಗಳಲ್ಲಿ ಪ್ರಥಮ ಸ್ಥಾನವನ್ನು ಬೆಂಗಳೂರಿನ ಎಸ್‌ಜೆಬಿ ತಾಂತ್ರಿಕ ಮಹಾವಿದ್ಯಾಲಯ, ಚಿಕ್ಕಬಳ್ಳಾಪುರದ ಎಸ್‌ಜೆಸಿ ತಾಂತ್ರಿಕ ಮಹಾವಿದ್ಯಾಲಯ ದ್ವಿತೀಯ ಸ್ಥಾನ, ದಾವಣಗೆರೆಯ ಡಿಆರ್‌ಎಂ ವಿಜ್ಞಾನ ಕಾಲೇಜು ತೃತೀಯ ಸ್ಥಾನ ಹಾಗೂ ಬಿಜಿ ನಗರದ ಆದಿಚುಂಚನಗಿರಿ ಫಾರ್ಮಸಿ ಕಾಲೇಜು ನಾಲ್ಕನೇ ಸ್ಥಾನವನ್ನು ಪಡೆಯಿತು.

‘ಪರಿಸರ ಮತ್ತು ಹವಮಾನ ಬದಲಾವಣೆಗೆ ಪರಿಹಾರ’ ವಿಷಯವಾಗಿ ರಚಿಸಲಾಗಿದ್ದ ಮಾಡೆಲ್‌ಗಳಲ್ಲಿ, ಮೈಸೂರಿನ ವಿದ್ಯಾವರ್ಧಕ ಎಂಜಿನಿಯರಿಂಗ್ ಕಾಲೇಜು ಪ್ರಥಮ ಸ್ಥಾನ, ಬೆಂಗಳೂರಿನ ಎಸ್‌ಜೆಬಿ ತಾಂತ್ರಿಕ ಮಹಾವಿದ್ಯಾಲಯ ದ್ವಿತೀಯ ಸ್ಥಾನ, ಮಹಾಲಕ್ಷ್ಮಿಪುರಂ ಬೆಂಗಳೂರಿನ ಬಿಜಿಎಸ್ ಇಂಜಿನಿಯರಿಂಗ್ ಮತ್ತು ತಾಂತ್ರಿಕ ಕಾಲೇಜು ತೃತೀಯ ಸ್ಥಾನ ಹಾಗೂ ಬೆಂಗಳೂರಿನ ರೇವಾ ವಿವಿ ನಾಲ್ಕನೇ ಸ್ಥಾನವನ್ನು ಪಡೆಯಿತು.

‘ಭವಿಷ್ಯದ ಜೀವನವನ್ನು ರೂಪಿಸುವುದು: ಆರೋಗ್ಯ ಮತ್ತು ಯೋಗಕ್ಷೇಮ’ ವಿಷಯವಾಗಿ ರಚಿಸಲಾದ ಮಾಡೆಲ್‌ಗಳಲ್ಲಿ ಬೆಂಗಳೂರಿನ ಕಾಲಭೈರವೇಶ್ವರ ಸ್ವಾಮಿ ಆಯುರ್ವೇದ ಮೆಡಿಕಲ್ ಕಾಲೇಜು ಪ್ರಥಮ ಸ್ಥಾನ, ಬಿಜಿ ನಗರದ ಆದಿಚುಂಚನಗಿರಿ ಮೆಡಿಕಲ್ ಕಾಲೇಜು ದ್ವಿತೀಯ ಸ್ಥಾನ, ಹಾಸನದ ಸರ್ಕಾರಿ ಸೈನ್ಸ್ ಕಾಲೇಜು ತೃತೀಯ ಸ್ಥಾನ ಹಾಗೂ ಚನ್ನಪಟ್ಟಣದ ಶ್ರೀಚಾಮುಂಡೇಶ್ವರಿ ಮೆಡಿಕಲ್ ಕಾಲೇಜು ನಾಲ್ಕನೇ ಸ್ಥಾನ ಪಡೆಯಿತು.

ಆಹಾರ ಭದ್ರತೆಯಲ್ಲಿ ಕೃಷಿಯಲ್ಲಿ ಎಐ ಮತ್ತು ಐಓಟಿ ವಿಚಾರಗಳ ಕುರಿತು ರಚಿಸಲಾದ ಮಾದರಿಯಲ್ಲಿ ನಾಗಮಂಗಲ ಆದಿಚುಂಚನಗಿರಿ ಕಲಾ ವಾಣಿಜ್ಯ ಮತ್ತು ವಿಜ್ಞಾನ ಕಾಲೇಜು ಪ್ರಥಮ, ಹಾಸನ ಸರ್ಕಾರಿ ವಿಜ್ಞಾನ ಕಾಲೇಜು ದ್ವಿತೀಯ, ಉಡುಪಿಯ ಬಂಟಕಲ್ ನ ಮಾರ್ಧ್ವ ವಾದಿರಾಜ ತಾಂತ್ರಿಕ ಕಾಲೇಜು‌ ತೃತೀಯ ಹಾಗೂ ಬಿಜಿ ನಗರದ ಬಿಜಿಎಸ್ ತಾಂತ್ರಿಕ ಮಹಾವಿದ್ಯಾಲಯ ನಾಲ್ಕನೇ ಸ್ಥಾನಕ್ಕೆ ಭಾಜನವಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.