ಯತ್ನಾಳ್
ಮಂಡ್ಯ: ‘ಕರ್ನಾಟಕ ಹಿಂದೂ ಪಾರ್ಟಿ ಕಟ್ಟುತ್ತೇನೆ ಎಂದು ಗುರುವಾರ ಹೇಳಿಕೆ ನೀಡಿದ್ದ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು, ಶುಕ್ರವಾರ ತಮ್ಮ ಹೇಳಿಕೆ ಬದಲಿಸಿದ್ದು, ‘ಹೊಸ ಪಕ್ಷ ಕಟ್ಟಬೇಕು ಅನ್ನೋದು ನನ್ನ ತಲೆಯಲ್ಲಿ ಇಲ್ಲ’ ಎಂದಿದ್ದಾರೆ.
ಮೇಲುಕೋಟೆಯಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿ, ‘ಹಿಂದುತ್ವ, ಅಭಿವೃದ್ಧಿ, ಭ್ರಷ್ಟಾಚಾರ ಮುಕ್ತ ವಿಷಯಗಳನ್ನು ಬಿಟ್ಟರೆ, ನನ್ನ ತಲೆಯಲ್ಲಿ ಬೇರೆ ಆಲೋಚನೆ ಇಲ್ಲ. ರಾಜಕೀಯ ಪಕ್ಷ ಕಟ್ಟಬೇಕು ಅಥವಾ ಬಿಜೆಪಿಗೆ ಸಡ್ಡು ಹೊಡಿಬೇಕು ಅನ್ನೋದು ನನ್ನಲ್ಲಿ ಇಲ್ಲ’ ಎಂದಿದ್ದಾರೆ.
‘ದೆಹಲಿಯ ಹೈಕಮಾಂಡ್ ಯಾರನ್ನು ನಂಬಿತ್ತೋ ಅವರು ಏನೂ ಅಲ್ಲ ಅಂತ ಗೊತ್ತಾಗಿದೆ. ರಾಜ್ಯ ಹಾಗೂ ಹೈಕಮಾಂಡ್‌ಗೆ ಯತ್ನಾಳ್ ಹಿಂದುತ್ವದ ಶಕ್ತಿ ಅರ್ಥವಾಗಿದೆ. ಬಿಜೆಪಿ ಹೈಕಮಾಂಡ್ ತನ್ನ ತಪ್ಪು ತಿದ್ದುಕೊಂಡು 2028ಕ್ಕೆ ನನಗೆ ಈ ರಾಜ್ಯದ ಜವಾಬ್ದಾರಿ ನೀಡಲಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.