ADVERTISEMENT

ಅಖಿಲ ಭಾರತೀಯ ಅಂಚೆ ಸಾಂಸ್ಕೃತಿಕ ಸಮ್ಮೇಳನ: ಅಗ್ರ ಸ್ಥಾನದಲ್ಲಿ ಕರ್ನಾಟಕ ವೃತ್ತ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2026, 4:11 IST
Last Updated 19 ಫೆಬ್ರುವರಿ 2026, 4:11 IST
ಕಿರಿಯರ ವಿಭಾಗದ ಕರ್ನಾಟಕ ಶೈಲಿಯ ಜಾನಪದ ಗಾಯನದಲ್ಲಿ ಪ್ರಥಮ ಸ್ಥಾನ ಪಡೆದ ಕರ್ನಾಟಕದ ಎಸ್. ಚಾರ್ಮಿ 
ಕಿರಿಯರ ವಿಭಾಗದ ಕರ್ನಾಟಕ ಶೈಲಿಯ ಜಾನಪದ ಗಾಯನದಲ್ಲಿ ಪ್ರಥಮ ಸ್ಥಾನ ಪಡೆದ ಕರ್ನಾಟಕದ ಎಸ್. ಚಾರ್ಮಿ    

ಮೈಸೂರು: ನಗರದಲ್ಲಿ ನಡೆಯುತ್ತಿರುವ 38ನೇ ಅಖಿಲ ಭಾರತೀಯ ಅಂಚೆ ಸಾಂಸ್ಕೃತಿಕ ಸಮ್ಮೇಳನದ ಎರಡನೇ ದಿನದ ಅಂತ್ಯಕ್ಕೆ ಕರ್ನಾಟಕ ಅಂಚೆ ವೃತ್ತವು ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಮುನ್ನಡೆದಿದೆ.

ಕರ್ನಾಟಕದ ಸ್ಪರ್ಧಿಗಳು ಒಟ್ಟು 11 ಪ್ರಥಮ, 13 ದ್ವಿತೀಯ ಮತ್ತು 2 ತೃತೀಯ ಬಹುಮಾನದೊಂದಿಗೆ ಮುನ್ನಡೆ ಪಡೆದಿದ್ದಾರೆ. ಕೇರಳ ವೃತ್ತವು 14 ಪ್ರಥಮ, 4 ದ್ವಿತೀಯ ಮತ್ತು 1 ತೃತೀಯ ಬಹುಮಾನದೊಂದಿಗೆ ಎರಡನೇ ಸ್ಥಾನದಲ್ಲಿದ್ದು, 9 ಬಹುಮಾನದೊಂದಿಗೆ ಒಡಿಶಾ ಅಂಚೆ ವೃತ್ತವು ಮೂರನೇ ಸ್ಥಾನವನ್ನು ಕಾಯ್ದುಕೊಂಡಿದೆ.

ವಿಜೇತರು: ಕರ್ನಾಟಕದ ಎಸ್. ಚಾರ್ಮಿ ಕಿರಿಯರ ವಿಭಾಗದ ಕರ್ನಾಟಕ ಶೈಲಿಯ ಜಾನಪದ ಗಾಯನದಲ್ಲಿ ಪ್ರಥಮ, ಒಡಿಸ್ಸಿ ನೃತ್ಯದಲ್ಲಿ ದ್ವಿತೀಯ ಬಹುಮಾನ ಪಡೆದಿದ್ದಾರೆ. ಪಲ್ಲವಿ ಎಲ್‌ ಕೊಡಿಯ ಹಿರಿಯರ ವಿಭಾಗದ ಕರ್ನಾಟಕ ಮತ್ತು ಹಿಂದೂಸ್ಥಾನಿ ಶೈಲಿಯ ಜಾನಪದ ಗಾಯನದಲ್ಲಿ ಪ್ರಥಮ, ಶಾಂಭವಿ ದೇಗಾವಿ ಮಠ್‌ ಕಿರಿಯರ ಹಿಂದೂಸ್ಥಾನಿ ಶೈಲಿಯ ಜಾನಪದ ಗಾಯನದಲ್ಲಿ ಪ್ರಥಮ, ಪ್ರದ್ಯುಮ್‌ ಕೌಶಿಕ್‌ ಸಿ.ಜಿ. ಹಿರಿಯರ ಹಿಂದೂಸ್ಥಾನಿ ಶೈಲಿಯ ಪಿಟೀಲು ವಾದನದಲ್ಲಿ ಪ್ರಥಮ, ಸ್ಪರ್ಶ ಹಿರಿಯರ ವಿಭಾಗದ ಭರತ ನಾಟ್ಯದಲ್ಲಿ ಪ್ರಥಮ, ಸೃಷ್ಠಿ ಕಿರಿಯರ ವಿಭಾಗದ ಸಾತ್ರಿಯ ನೃತ್ಯದಲ್ಲಿ ದ್ವಿತೀಯ, ಪುಣ್ಯಶ್ರೀ ಡಿ.ಎಂ. ಕಿರಿಯರ ಮೋಹಿನಿಅಟ್ಟಂ ನೃತ್ಯದಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದಾರೆ.

ADVERTISEMENT

ಕೇರಳ ಅಂಚೆ ವೃತ್ತದ ನಿರಂಜನಾ ಕೆ. ಎಸ್.‌ ಕಿರಿಯರ ಭರತನಾಟ್ಯದಲ್ಲಿ ಪ್ರಥಮ, ದುರ್ಗಾರಾಂ ಹಿರಿಯರ ಮೋಹಿನಿಆಟ್ಟಂನಲ್ಲಿ ಪ್ರಥಮ, ಗೌತಮ್‌ ಗಣೇಶ್‌ ಹಿರಿಯರ ಕಥಕ್ಕಳಿ ನೃತ್ಯದಲ್ಲಿ ಪ್ರಥಮ, ನಯನ ವಾಸುದೇವ್‌ ಹಿರಿಯರ ಕರ್ನಾಟದ ಶೈಲಿ ಜಾನಪದ ಗಾಯನದಲ್ಲಿ ದ್ವಿತೀಯ, ಕೆ.ಎನ್‌. ಶಿವಾನಂದನ ಕಿರಿಯರ ಕರ್ನಾಟಕ ಶೈಲಿ ಜಾನಪದ ಗಾಯನದಲ್ಲಿ ದ್ವಿತೀಯ ಬಹುಮಾನವನ್ನು ಪಡೆದರು.

ಒಡಿಶಾ ಅಂಚೆ ವೃತ್ತದ ಬನಶ್ರೀ ಪಟ್ನಾಯಕ್ ಹಿರಿಯರ ಕರ್ನಾಟಕ ಶೈಲಿ ಜಾನಪದ ಗಾಯನದಲ್ಲಿ ದ್ವಿತೀಯ, ಲಕ್ಷ್ಮಣ್‌ ದಾಸ್‌ ವಿಶೇಷ ಬಹುಮಾನ ಹಾಗೂ ತಬಲ ವಾದನದಲ್ಲಿ ಅಮನ್‌ ಕುಮಾರ್‌ ದಾಸ್‌ ಪ್ರಥಮ ಬಹುಮಾನ ಪಡೆದಿದ್ದಾರೆ.

ಕರ್ನಾಟಕ ಅಂಚೆ ವೃತ್ತವು ಆಯೋಜಿಸಿರುವ ಈ ಐದು ದಿನಗಳ ಸಾಂಸ್ಕೃತಿಕ ಹಬ್ಬದಲ್ಲಿ ದೇಶದ 21 ಅಂಚೆ ವೃತ್ತಗಳ 335 ಅಂಚೆ ನೌಕರರು ಪಾಲ್ಗೊಂಡಿದ್ದಾರೆ.

ಹಿರಿಯರ ವಿಭಾಗದ ಕರ್ನಾಟಕ ಮತ್ತು ಹಿಂದೂಸ್ಥಾನಿ ಶೈಲಿಯ ಜಾನಪದ ಗಾಯನದಲ್ಲಿ ಪ್ರಥಮ ಸ್ಥಾನ ಪಡೆದ ಪಲ್ಲವಿ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.