
ಬನ್ನೂರು: ತಿ. ನರಸೀಪುರ ತಾಲ್ಲೂಕಿನ ಬನ್ನೂರು ಪಟ್ಟಣದ ಎಸ್‌ಆರ್‌ಪಿ ರಸ್ತೆಯ ಹಾಲಿನ ಡೇರಿ ಮುಂಭಾಗ ಮೈಸೂರು ಜಿಲ್ಲಾ ಕನ್ನಡ ಕುಲದೈವ ಡಾ.ಅಂಬರೀಶ್ ಹಾಗು ಅಭಿಷೇಕ್ ಅಂಬರೀಶ್ ಅಭಿಮಾನಿ ಸಂಘದ ವತಿಯಿಂದ ಶನಿವಾರ ನಡೆದ ಅಂಬರೀಶ್ ಪುತ್ಥಳಿ ಅನಾವರಣ ಕಾರ್ಯಕ್ರಮ ನಡೆಯಿತು.
ಸುಮಲತಾ ಅಂಬರೀಶ್ ಮಾತನಾಡಿ, ಅಂಬಿ ಅಭಿಮಾನಿಗಳ ಪಾಲಿಗೆ ಆರಾಧ್ಯ ದೈವವಾಗಿದ್ದು, ಅಭಿಮಾನಿಗಳು ಇಂದಿಗೂ ಕಲಿಯುಗ ಕರ್ಣ ಎಂದೇ ಪೂಜಿಸುತ್ತಾರೆ. ಪುತ್ಥಳಿ ನಿರ್ಮಿಸಿ ಅವರಿಗೆ ಗೌರವ ಸಲ್ಲಿಸಿರುವುದು ಶ್ಲಾಘನೀಯ. ಅಭಿಮಾನಿಗಳ ಪ್ರೀತಿ ಅಂಬರೀಶ್ ಅವರನ್ನು ಅಜರಾಮರವಾಗಿಸಿದ್ದು, ಪ್ರತಿ ಅಭಿಮಾನಿಯ ಮನದಲ್ಲಿದ್ದಾರೆ ಎಂದರು.
ಅಂಬರೀಶ್ ತಮ್ಮ ಸರಳ ಸನ್ನಡತೆಯಿಂದ ಅಪಾರ ಅಭಿಮಾನಿ ಬಳಗ ಮತ್ತು ಸ್ನೇಹಿತರನ್ನು ಸಂಪಾದಿಸಿದ್ದು, ಅವರ ಕಾಲವಾದ ನಂತರವು ಅದೇ ಅಭಿಮಾನ ಕುಟುಂಬದ ಮೇಲೆ ನಿರಂತವಾಗಿ ಮುಂದುವರಿದಿದೆ. ನಿಮ್ಮೆಲ್ಲರ ಅಭಿಮಾನಕ್ಕೆ ಕೃತಜ್ಞತೆ ಎಂದರು.
ನಟ ಅಭಿಷೇಕ್ ಅಂಬರೀಶ್ ಮಾತನಾಡಿ, ಜೀವನದಲ್ಲಿ ಎನೂ ಶಾಶ್ವತ ಅಲ್ಲ. ಇಲ್ಲಿ ಶಾಶ್ವತವಾಗಿರುವುದು ಅಭಿಮಾನಿಗಳ ಪ್ರೀತಿ ಎನ್ನುವುದನ್ನು ಇಲ್ಲಿ ಪ್ರತಿಷ್ಠಾಪಿಸಿರುವ ಪುತ್ಥಳಿ ಹೇಳುತ್ತಿದೆ ಎಂದರು.
ಗೌರಿಶಂಕರ ಸ್ವಾಮೀಜಿ, ಚಲನಚಿತ್ರ ನಟಿ ಮಾಲಾಶ್ರೀ, ಅನುರಾಧ ರಾಮು, ಚಿತ್ರ ನಟ ವಿನೋದ ಪ್ರಭಾಕರ್, ಚಿಕ್ಕಣ್ಣ, ನಿರೂಪಕಿ ದಿವ್ಯ ಆಲೂರು, ಅಂಬರೀಶ್ ಅಭಿಮಾನಿ ಸಂಘದ ಗೌರವಾಧ್ಯಕ್ಷ ವೆಂಕಟೇಶ್, ಅಧ್ಯಕ್ಷ ಬಿ.ಸಿ.ನಂದೀಶ್, ಉಪಾಧ್ಯಕ್ಷ ನಾಗೇಂದ್ರ, ಪುರಸಭೆ ಮಾಜಿ ಅಧ್ಯಕ್ಷ ಕೃಷ್ಣೇಗೌಡ, ಮಾಜಿ ರೋಟರಿ ಅಧ್ಯಕ್ಷ ಡಾ.ಮಹೇಂದ್ರ ಸಿಂಗ್ ಕಾಳಪ್ಪ, ತಾಲ್ಲೂಕು ಒಕ್ಕಲಿಗ ಸಂಘದ ಅಧ್ಯಕ್ಷ ವೈ.ಎಸ್.ರಾಮಸ್ವಾಮಿ, ಮೈಮುಲ್ ಮಾಜಿ ಅಧ್ಯಕ್ಷ ಚಲುವರಾಜು, ಬೇಲೂರು ಸೋಮಶೇಖರ್, ಒಕ್ಕಲಿಗ ಸಂಘದ ಉಪಾಧ್ಯಕ್ಷ ಗಂಗಾಧರ್, ಮಂಚೇಗೌಡ, ಅಂಬರೀಶ್, ಎಂ.ಆರ್.ಪ್ರಸನ್ನ, ಬಿ.ನಂದೀಶ್, ಬಿ.ಕೆ.ಬಾಬುನಂದನ್, ಎಚ್.ಎಸ್.ಆನಂದ್ ಕುಮಾರ್, ಬಿ.ಕೆ.ಆನಂದ್, ಜಗದೀಶ್, ಎಂ.ರವಿ, ಜಯರಾಮು, ಮಹೇಂದ್ರ, ಎಂ.ಡಿ.ಪ್ರಸನ್ನ, ಬಿ.ಆರ್.ವೆಂಕಟೇಶ್, ಸುರೇಶ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.