ಮೈಸೂರು: ‘ರಾಜ್‌ಕುಮಾರ್ ಕಲಾ ಸೇವಾ ಟ್ರಸ್ಟ್‌ನಿಂದ ಮಾರ್ಚ್ 22 ಮತ್ತು 23ರಂದು ನಟ ಪುನೀತ್ ರಾಜ್‌ಕುಮಾರ್ ಅವರ 50ನೇ ಜನ್ಮದಿನಾಚರಣೆ ನೆನಪಿನಲ್ಲಿ ನಗರದ ಜಗನ್ಮೋಹನ ಅರಮನೆ ಸಭಾಂಗಣದಲ್ಲಿ ‘ಅಪ್ಪು ವೈಭವ’ ಕಾರ್ಯಕ್ರಮ ಆಯೋಜಿಸಲಾಗಿದೆ’ ಎಂದು ಸಂಸ್ಥಾಪಕ ಅಧ್ಯಕ್ಷ ಜಯರಾಮರಾಜು ತಿಳಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮಾರ್ಚ್ 22ರಂದು ಸಂಜೆ 5ರಿಂದ ರಾತ್ರಿ 9.30ರವರೆಗೆ ನಟ ರಾಜ್‌ಕುಮಾರ್ ಕುಟುಂಬದವರ ಅಭಿನಯದ ಗೀತೆಗಳನ್ನು ಖ್ಯಾತ ಗಾಯಕರು ಹಾಡುವರು. 23ರಂದು ಬೆಳಿಗ್ಗೆ 8ರಿಂದ ಮಧ್ಯಾಹ್ನ 1.30ರವರೆಗೆ ಕಣ್ಣಿನ ಉಚಿತ ತಪಾಸಣಾ ಶಿಬಿರ ನಡೆಯಲಿದೆ. ಅಂದು ಬೆಳಿಗ್ಗೆ 10ಕ್ಕೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದಿಂದ ಜಗನ್ಮೋಹನ ಅರಮನೆವರೆಗೆ ಅಪ್ಪು ಉತ್ಸವ ಮೆರವಣಿಗೆ ನಡೆಯಲಿದ್ದು, ಶಾಸಕ ಕೆ.ಹರೀಶ್ ಗೌಡ, ಎಚ್.ವಿ.ರಾಜೀವ್ ಉದ್ಘಾಟಿಸುವರು. ಸಂಜೆ 4ರವರೆಗೆ ಗಾಯನ ನಡೆಯಲಿದೆ’ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ನಟ ರಾಜ್ ಕುಟುಂಬದ ಅಭಿಮಾನಿಗಳಾದ ಸೋಮಶೇಖರ್, ಸಿ.ಶಿವರಾಜ್, ಕೆ.ರವಿ, ವೆಂಕಟೇಶ್ ಹಾಗೂ ಆಟೊ ಶಿವು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.