
ಪ್ರಜಾವಾಣಿ ವಾರ್ತೆ
ಅಡಿಕೆ(ಪ್ರಾತಿನಿಧಿಕ)
ಪಿರಿಯಾಪಟ್ಟಣ: ತಾಲ್ಲೂಕಿನ ಬೈಲಕುಪ್ಪೆ ಒಂದನೇ ಹಳೆಯ ಟಿಬೆಟನ್ ಶಿಬಿರದ ನಿವಾಸಿ ಚಂಬಾ ಅವರ ಅಡಿಕೆ ತೋಟದಲ್ಲಿ ಬೆಳೆದಿದ್ದ ಅಡಿಕೆಯನ್ನು ಕಳ್ಳರು ಕಟಾವು ಮಾಡಿಕೊಂಡು ಹೋಗಿದ್ದಾರೆ.
ಶನಿವಾರ ರಾತ್ರಿ ಸುಮಾರು ₹ 30 ಸಾವಿರ ಮೌಲ್ಯದ 10 ಕ್ವಿಂಟಲ್ ಹಸಿ ಅಡಿಕೆಯನ್ನು ಕದ್ದು ಕಟಾವು ಮಾಡಿ ಕೊಂಡು ಹೋಗಿರುವುದಾಗಿ ಬೈಲಕುಪ್ಪೆ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.