ಮೈಸೂರು: ‘ಇಲ್ಲಿನ ಜಯಲಕ್ಷ್ಮಿಪುರಂನ ಮಹಾಜನ ವಿದ್ಯಾಸಂಸ್ಥೆಯ 7ನೇ ತರಗತಿ ವಿದ್ಯಾರ್ಥಿ ಕೀರ್ತಿರಾಜ್ ಸಿಂಗ್ ಈಚೆಗೆ ಉತ್ತರಾಖಂಡ್‌ನ ಡೆಹ್ರಾಡೂನ್‌ನಲ್ಲಿ ನಡೆದ ಏಷ್ಯನ್ ಓಪನ್ ಶಾರ್ಟ್‌ಟ್ರ್ಯಾಕ್ ಸ್ಪೀಡ್ ಸ್ಕೇಟಿಂಗ್ ಟ್ರೋಫಿ–2025 ಸ್ಪರ್ಧೆಯಲ್ಲಿ 2 ಚಿನ್ನದ ಪದಕ ಗಳಿಸಿದ್ದಾರೆ’ ಎಂದು ಸಂಸ್ಥೆಯ ಗೌರವ ಕಾರ್ಯದರ್ಶಿ ವಿಜಯಲಕ್ಷ್ಮಿ ಮುರಳೀಧರ್ ತಿಳಿಸಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸುನೀಲ್ ಸಿಂಗ್, ರೀತು ದೇವಿ ಅವರ ಪುತ್ರ ಕೀರ್ತಿರಾಜ್ ಓದಿನಲ್ಲಿಯೂ ಚುರುಕಿದ್ದು, ಕಾವ್ಯ ರಚನೆ, ಚಿತ್ರಕಲೆ, ಗಾಯನ ಹಾಗೂ ಪಿಯಾನೋ ವಾದನದಲ್ಲಿಯೂ ಪ್ರತಿಭೆ ಹೊಂದಿದ್ದಾನೆ. ವಿದ್ಯಾರ್ಥಿಯ ಸಾಧನೆಯನ್ನು ಗೌರವಿಸಲು ಸಂಸ್ಥೆಯಲ್ಲಿ ಆತ ಓದುವವರೆಗೂ ಉಚಿತ ಶಿಕ್ಷಣ ನೀಡಲು ನಿರ್ಧರಿಸಲಾಗಿದೆ ಹಾಗೂ ಸೆ.6ರಂದು ಬೆಳಿಗ್ಗೆ 10ಕ್ಕೆ ಶಾಲೆ ಆವರಣದಲ್ಲಿ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದು ಮಾಹಿತಿ ನೀಡಿದರು.
ಪ್ರಾಂಶುಪಾಲರಾದ ರಾಜೇಶ್ವರಿ ಅಯ್ಯರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.