ADVERTISEMENT

ಮೈಸೂರು: ಜಿಲ್ಲಾಡಳಿತ, ವಿವಿಧ ಸಂಘ–ಸಂಸ್ಥೆಗಳಿಂದ ಬಾಬು ಜಗಜೀವನರಾಂ ಜಯಂತಿ ಆಚರಣೆ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2024, 16:00 IST
Last Updated 5 ಏಪ್ರಿಲ್ 2024, 16:00 IST
ಮೈಸೂರಿನ ರೈಲು ನಿಲ್ದಾಣ ಸಮೀಪದ ವೃತ್ತದಲ್ಲಿ ಜಿಲ್ಲಾಡಳಿತದಿಂದ ಬಾಬು ಜಗಜೀವನರಾಂ ಜಯಂತಿ ಅಂಗವಾಗಿ ಡಾ.ಕೆ.ವಿ. ರಾಜೇಂದ್ರ ಅವರು ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದರು. ರಮೇಶ್ ಬಾನೋತ್, ಕೆ.ಎಂ.ಗಾಯಿತ್ರಿ, ಎನ್.ಎಸ್. ಮಧು, ಪ್ರೊ.ಎನ್.ಕೆ. ಲೋಕನಾಥ್‌ ಪಾಲ್ಗೊಂಡಿದ್ದರು –ಪ್ರಜಾವಾಣಿ ಚಿತ್ರ
ಮೈಸೂರಿನ ರೈಲು ನಿಲ್ದಾಣ ಸಮೀಪದ ವೃತ್ತದಲ್ಲಿ ಜಿಲ್ಲಾಡಳಿತದಿಂದ ಬಾಬು ಜಗಜೀವನರಾಂ ಜಯಂತಿ ಅಂಗವಾಗಿ ಡಾ.ಕೆ.ವಿ. ರಾಜೇಂದ್ರ ಅವರು ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದರು. ರಮೇಶ್ ಬಾನೋತ್, ಕೆ.ಎಂ.ಗಾಯಿತ್ರಿ, ಎನ್.ಎಸ್. ಮಧು, ಪ್ರೊ.ಎನ್.ಕೆ. ಲೋಕನಾಥ್‌ ಪಾಲ್ಗೊಂಡಿದ್ದರು –ಪ್ರಜಾವಾಣಿ ಚಿತ್ರ   

ಮೈಸೂರು: ನಗರದಲ್ಲಿ ಮಾಜಿ ಉಪ ಪ್ರಧಾನಿ ಬಾಬು ಜಗಜೀವನರಾಂ ಅವರ ಜಯಂತಿಯನ್ನು ಶುಕ್ರವಾರ ಸರಳವಾಗಿ ಆಚರಿಸಲಾಯಿತು. ಅಧಿಕಾರಿಗಳು, ರಾಜಕಾರಣಿಗಳು, ಕಾಂಗ್ರೆಸ್‌, ಬಿಜೆಪಿ ಸೇರಿದಂತೆ ವಿವಿಧ ರಾಜಕೀಯ ಪಕ್ಷದವರು ಹಾಗೂ ಸಂಘ–ಸಂಸ್ಥೆಗಳ ‍ಮುಖಂಡರು ಇಲ್ಲಿನ ರೈಲು ನಿಲ್ದಾಣದ ಸಮೀಪದಲ್ಲಿರುವ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಮನ ಸಲ್ಲಿಸಿದರು. ಅವರು ದೇಶಕ್ಕೆ ನೀಡಿದ ಕೊಡುಗೆಗಳನ್ನು ಸ್ಮರಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ, ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್‌ ಹಾಗೂ ಜಿಲ್ಲಾ ಪಂಚಾಯಿತಿ ಸಿಇಒ ಕೆ.ಎಂ.ಗಾಯಿತ್ರಿ ಮೊದಲಾದವರು ಮಾಲಾರ್ಪಣೆ ಮಾಡಿ ಪುಷ್ಪನಮನ ಸಲ್ಲಿಸಿದರು. ಮೈಸೂರು ವಿಶ್ವವಿದ್ಯಾಲಯದ ಪರವಾಗಿ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್‌ ಮಾಲಾರ್ಪಣೆ ಮಾಡಿದರು.

ಕಾಂಗ್ರೆಸ್‌ ವತಿಯಿಂದ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಬಿ.ಎಂ. ರಾಮ, ನಗರ ಜಿಲ್ಲಾ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಎಂ ಶಿವಣ್ಣ, ನರಸಿಂಹರಾಜ ಕ್ಷೇತ್ರದ ಬ್ಲಾಕ್ ಅಧ್ಯಕ್ಷ ಮಂಜು, ಡಿಸಿಸಿ ವಕ್ತಾರರ ಮಹೇಶ್ ಕೆ. ನಮನ ಸಲ್ಲಿಸಿದರು.

ADVERTISEMENT

ಬಿಜೆಪಿ ನಗರ ಘಟಕದ ಕಾರ್ಯಾಲಯದಲ್ಲಿ ಬಾಬೂಜಿ ಜಯಂತಿ ಆಚರಿಸಲಾಯಿತು. ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಕೆ.ಆರ್. ಕ್ಷೇತ್ರದ ಶಾಸಕ ಟಿ.ಎಸ್. ಶ್ರೀವತ್ಸ, ಬಿಜೆಪಿ ನಗರ ಘಟಕದ ಪ್ರಧಾನ ಕಾರ್ಯದರ್ಶಿಗಳಾದ ಬಿ.ಎಂ. ರಘು, ಎಚ್‌.ಜಿ. ಗಿರಿಧರ್, ಎಸ್‌.ಸಿ. ಮೋರ್ಚಾ ನಗರ ಘಟಕದ ಅಧ್ಯಕ್ಷ ಶೈಲೇಂದ್ರ, ನಗರ ಘಟಕದ ಉಪಾಧ್ಯಕ್ಷ ಜೋಗಿ ಮಂಜು, ಜಯರಾಮ್, ರವಿ, ಕಾರ್ತಿಕ್ ಮರಿಯಪ್ಪ, ಸ್ವಾಮಿ ಉಪಸ್ಥಿತರಿದ್ದರು.

ಬಿಜೆ‍ಪಿ ನಗರ ಎಸ್‌.ಟಿ. ಮೋರ್ಚಾದಿಂದ ರೈಲು ನಿಲ್ದಾಣ ವೃತ್ತದಲ್ಲಿರುವ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು. ನಗರ ಘಟಕದ ಅಧ್ಯಕ್ಷ ಎಲ್. ನಾಗೇಂದ್ರ, ವಿಧಾನಪರಿಷತ್‌ ಮಾಜಿ ಸದಸ್ಯ ಬಿ.ಸಿದ್ದರಾಜು, ಮಾಜಿ ಮೇಯರ್ ಶಿವಕುಮಾರ್, ಎಸ್‌ಟಿ ಮೋರ್ಚಾ ನಗರ ಘಟಕದ ಅಧ್ಯಕ್ಷ ಪಡುವಾರಹಳ್ಳಿ ಎಂ.ರಾಮಕೃಷ್ಣ, ಎಸ್‌ಸಿ ಮೋರ್ಚಾದ ನಗರ ಘಟಕದ ಅಧ್ಯಕ್ಷ ಶೈಲೇಂದ್ರ, ಮುಖಂಡರಾದ ಮಂಜುನಾಥಪುರಂ ಎಂ. ಮಹೇಶ್, ಕೆ.ಗಿರೀಶ್ ‍‍ಪಾಲ್ಗೊಂಡಿದ್ದರು.

ಚಾಮುಂಡೇಶ್ವರಿ ಯುವ ಬಳಗದಿಂದ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಸಾರ್ವಜನಿಕರಿಗೆ ಸಿಹಿ ವಿತರಿಸಲಾಯಿತು. ಕೆಪಿಸಿಸಿ ಸದಸ್ಯರಾದ ನಜರ್‌ಬಾದ್‌ ನಟರಾಜ್, ಮುಖಂಡರಾದ ವರುಣ ಮಹದೇವ್, ಚಂದ್ರು, ಲೋಕೇಶ್, ಕೇಶವಯ್ಯ, ಕಡಕೋಳ ಶಿವಲಿಂಗ, ರವಿಚಂದ್ರ, ಜಿ. ರಾಘವೇಂದ್ರ ಭಾಗವಹಿಸಿದ್ದರು.

ಮುಖಂಡರಾದ ಬಿ.ರಾಜಶೇಖರ, ಪ್ರಶಾಂತ, ರವಿ, ಸಿದ್ದರಾಜು, ಶಿವರುದ್ರ ಹಾಗೂ ಮಹದೇವ ನಮನ ಸಲ್ಲಿಸಿದರು.

ಬಾಬು ಜಗಜೀವನರಾಂ ಚರ್ಮ ಕೈಗಾರಿಕೆ ಸ್ವಯಂ ಉದ್ಯೋಗ ಸ್ವಸಹಾಯ ಸಂಘದಿಂದ ಜಯಂತಿ ಆಚರಿಸಲಾಯಿತು. ಗೌರವಾಧ್ಯಕ್ಷ ಎಚ್‌.ಸಿ. ಶಿವಣ್ಣ, ಅಧ್ಯಕ್ಷ ಕುಮಾರ್, ಉಪಾಧ್ಯಕ್ಷ ಕಿಶೋರ್‌ಕುಮಾರ್‌ ಆರ್, ಕಾರ್ಯದರ್ಶಿ ಬಿ. ಪ್ರಕಾಶ್, ಸಹ ಕಾರ್ಯದರ್ಶಿ ಸಿದ್ದರಾಜು ಬಿ, ಖಜಾಂಚಿ ರಾಮಚಂದ್ರು, ಸಂಚಾಲಕ ರವೀಂದ್ರ, ನಿರ್ದೇಶಕರಾದ ಅರುಣ, ರಾಚಪ್ಪ, ಸುಬ್ರಮಣಿ, ಸಿದ್ದರಾಜು ಕೆ, ವಿಶ್ವನಾಥ ಮಾಲಾರ್ಪಣೆ ಮಾಡಿದರು.

ದಲಿತ ಸಂಘರ್ಷ ಸಮಿತಿ ಜಿಲ್ಲಾ ಘಟಕದಿಂದ ಮುಖಂಡರಾದ ಎಸ್. ಶಿವಣ್ಣ, ನಾಗರಾಜ್‌, ಮಹೇಶ್, ಶಂಕರ, ಗಿರೀಶ್, ರಾಜೇಶ್, ರಾಚಯ್ಯ, ಮಣಿಕಂಠ, ರಾಘವೇಂದ್ರ, ಕರಿಯ‍ಪ್ಪ, ರವಿಕುಮಾರ್‌ ಮಾಲಾರ್ಪಣೆ ಮಾಡಿದರು.

ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಬಿ. ರಂಗೇಗೌಡ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಎಂ.ಕೆ. ಮಲ್ಲೇಶ್, ಪಶುಸಂಗೋಪನಾ ಇಲಾಖೆಯ ಜಂಟಿ ನಿರ್ದೇಶಕ ಡಾ.ನಾಗರಾಜ್, ತಾಲ್ಲೂಕು ಕಲ್ಯಾಣಾಧಿಕಾರಿ ಸಿದ್ದಲಿಂಗು ಮಾಲಾರ್ಪಣೆ ಮಾಡಿದರು.

ಬೆಳಿಗ್ಗೆ, ಜಯಂತಿ ಆಚರಣೆ ಬಳಿಕ ಕೆಲವೇ ನಿಮಿಷಕ್ಕೆ ಭಾವಚಿತ್ರ ತೆರವುಗೊಳಿಸಿದ್ದನ್ನು ಖಂಡಿಸಿ ಅಭಿಮಾನಿಗಳು ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿದರು.

ಬಿಜೆಪಿ ಎಸ್‌ಟಿ ಮೋರ್ಚಾದ ಪದಾಧಿಕಾರಿಗಳು ಹಾಗೂ ಮುಖಂಡರು ಬಾಬು ಜಗಜೀವನರಾಂ ಪ್ರತಿಮೆಗೆ ಶುಕ್ರವಾರ ಮಾಲಾರ್ಪಣೆ ಮಾಡಿದರು
ಮೈಸೂರಿನಲ್ಲಿ ಚಾಮುಂಡೇಶ್ವರಿ ಯುವ ಬಳಗದವರು ಬಾಬು ಜಗಜೀವನರಾಂ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.