ADVERTISEMENT

ರಾಂಪುರದ ಮತಗಟ್ಟೆ ಬಳಿ ವಾಮಾಚಾರ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2020, 4:21 IST
Last Updated 21 ಡಿಸೆಂಬರ್ 2020, 4:21 IST
ಸಾಲಿಗ್ರಾಮ ತಾಲ್ಲೂಕಿನ ರಾಂಪುರ ಗ್ರಾಮದ ಮತಗಟ್ಟೆಯ ಬಾಗಿಲಿನಲ್ಲಿ ವಾಮಾಚಾರ ಮಾಡಿ ಕುಡಿಕೆಯನ್ನು ಭಾನುವಾರ ಇಟ್ಟಿರುವುದು
ಸಾಲಿಗ್ರಾಮ ತಾಲ್ಲೂಕಿನ ರಾಂಪುರ ಗ್ರಾಮದ ಮತಗಟ್ಟೆಯ ಬಾಗಿಲಿನಲ್ಲಿ ವಾಮಾಚಾರ ಮಾಡಿ ಕುಡಿಕೆಯನ್ನು ಭಾನುವಾರ ಇಟ್ಟಿರುವುದು   

ಸಾಲಿಗ್ರಾಮ: ತಾಲ್ಲೂಕಿನ ಕರ್ಪೂರವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಂಪುರ ಗ್ರಾಮದ ಮತಗಟ್ಟೆ ಸಂಖ್ಯೆ 46ರ ಮುಂದೆ ವಾಮಾಚಾರ ಮಾಡಿರುವುದು ಭಾನುವಾರ ಕಂಡು ಬಂದಿದೆ.

ಮಣ್ಣಿನ ಕುಡಿಕೆಯ ಬಾಯಿಗೆ ಕೆಂಪುಬಟ್ಟೆ ಕಟ್ಟಿ ನೀರಿನ ಪೈಪ್‌ಗೆ ತೂಗು ಹಾಕಲಾಗಿದೆ. ಮತ್ತೊಂದು ಇದೇ ರೀತಿಯ ಕುಡಿಕೆಯನ್ನು ಮತಗಟ್ಟೆಗೆ ಹೋಗುವ ಬಾಗಿಲಿನಲ್ಲೇ ಇಟ್ಟಿದ್ದಾರೆ. ಸ್ವಚ್ಛಗೊಳಿಸಲು ಬಂದ ಮಹಿಳೆ ಇದನ್ನು ನೋಡಿ ಗ್ರಾಮಸ್ಥರ ಗಮನಕ್ಕೆ ತಂದಿದ್ದಾರೆ.

ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ರಮೇಶ್‌ ಮತ್ತು ಸಾಲಿಗ್ರಾಮ ನಾಡ ಕಚೇರಿಯ ಕಂದಾಯ ಅಧಿಕಾರಿ ದರ್ಶನ್ ಅವರು ಸ್ಥಳಕ್ಕೆ ಭೇಟಿ ನೀಡಿ ವಾಮಾಚಾರದ ಕುಡಿಕೆಗಳನ್ನು ತೆರವುಗೊಳಿಸಿದ್ದಾರೆ. ಇದನ್ನು ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿದ್ದರು. ಮತ ಹಾಕಲು ಬರುವ ಮತದಾರರಿಗೆ ಇದು ಭೀತಿ ಸೃಷ್ಟಿಸಿದೆ. ಇಲ್ಲಿ ಡಿ.22ರಂದು ಮತದಾನ ನಡೆಯಲಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.