ADVERTISEMENT

ಲಾಯಲ್ ವರ್ಲ್ಡ್‌ನಿಂದ ಗಿನ್ನೆಸ್ ದಾಖಲೆಗೆ ಸಿದ್ಧತೆ

ವಿಶ್ವದ ಅತಿ ದೊಡ್ಡ ಕಪ್‌ಕೇಕ್‌ ನಿರ್ಮಿಸುವ ಕಾರ್ಯ ಇಂದಿನಿಂದ ಆರಂಭ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2020, 11:56 IST
Last Updated 25 ಡಿಸೆಂಬರ್ 2020, 11:56 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಮೈಸೂರು: ವಿಶ್ವದ ಅತಿ ದೊಡ್ಡ ‘ಕಪ್‌ಕೇಕ್‌’ ತಯಾರಿಸುವ ಸಿದ್ಧತೆ ಇಲ್ಲಿನ ವಿ.ವಿ.ಮೊಹಲ್ಲಾದ ‘ಲಾಯಲ್ ವರ್ಲ್ಡ್‌’ನಲ್ಲಿ ನಡೆದಿದೆ. 15 ಕ್ವಿಂಟಲ್‌ (1,500 ಕೆ.ಜಿ) ತೂಕದ ‘ಕಪ್‌ಕೇಕ್’ ತಯಾರಿಸುವ ಮೂಲಕ ಗಿನ್ನೆಸ್ ದಾಖಲೆ ನಿರ್ಮಿಸುವ ಪ್ರಯತ್ನ ಆರಂಭವಾಗಿದೆ.

ಡಿ. 26ರಂದು ಮಧ್ಯಾಹ್ನ 3 ಗಂಟೆಗೆ ಅರೋಮಾ ಬೇಕರ್ಸ್‌ನ 10 ಮಂದಿ ಬಾಣಸಿಗರ ತಂಡವು ಇದಕ್ಕೆಂದೇ ನಿರ್ಮಿಸಲಾದ 7 ಅಡಿ ಅಗಲ ಹಾಗೂ 6 ಅಡಿ ಎತ್ತರದ ವಿಶೇಷವಾದ ಒಲೆಯಲ್ಲಿ ಸತತ 12 ಗಂಟೆಗಳ ಕಾಲ ಕೇಕ್‌ ತಯಾರಿಸಲಿದ್ದಾರೆ. ಡಿ. 27ರಂದು ಸಂಜೆ 5 ಗಂಟೆಗೆ ಇದನ್ನು ಸಾರ್ವಜನಿಕ ವೀಕ್ಷಣೆಗೆ ಮುಕ್ತಗೊಳಿಸಲಾಗುತ್ತದೆ ಎಂದುಲಾಯಲ್ ವರ್ಲ್ಡ್ ಗ್ರೂಪ್‌ನ ಕಾರ್ಯನಿರ್ವಾಹಕ ನಿರ್ದೇಶಕ ಮಹಮ್ಮದ್ ಇಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಇದಕ್ಕಾಗಿ 10 ಸಾವಿರ ಕೋಳಿಮೊಟ್ಟೆ, 380 ಕೆ.ಜಿ ಮೈದಾಹಿಟ್ಟು, 450 ಕೆ.ಜಿ ಸಕ್ಕರೆ, 200 ಕೆ.ಜಿ ಬೆಣ್ಣೆಯನ್ನು ಬಳಕೆ ಮಾಡಲಾಗುತ್ತದೆ. ಇದನ್ನು ತೂಕ ಮತ್ತು ಅಳತೆ ಮಾಡಲು ಗಿನ್ನೆಸ್‌ ಬುಕ್‌ನ ತಂಡದ ಸದಸ್ಯರು ನಗರಕ್ಕೆ ಬರಲಿದ್ದಾರೆ. ಎರಡು ದಿನಗಳ ಕಾಲ ಪ್ರದರ್ಶನಕ್ಕಿಟ್ಟಿದ್ದು, ನಂತರ ಇದನ್ನು ಬಡವರಿಗೆ ಉಚಿತವಾಗಿ ಹಂಚಲಾಗುತ್ತದೆ ಎಂದು ಅವರು ಹೇಳಿದರು.

ADVERTISEMENT

ಅಮೆರಿಕದಲ್ಲಿ 2011ರಲ್ಲಿ 1,176.6 ಕೆ.ಜಿ ತೂಕದ ಕಪ್‌ಕೇಕ್‌ ತಯಾರಿಸಿದ್ದೇ ಇಲ್ಲಿಯರೆಗಿನ ಗಿನ್ನೆಸ್ ದಾಖಲೆಯಾಗಿದೆ ಎಂದು ಅವರು ಮಾಹಿತಿ ನೀಡಿದರು.

ನೂತನ ಆ್ಯಪ್‌ ಬಿಡುಗಡೆ

ಕೊರೊನಾದಿಂದ ಹೊರಗೆ ಬರಲು ಬಹುತೇಕ ಮಂದಿ ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ, ಮೊಬೈಲ್‌ ಆ್ಯಪ್‌ನ್ನು ರೂಪಿಸಲಾಗಿದ್ದು, ಇದರಲ್ಲೇ ಬೇಕೆಂದ ಕೇಕ್‌ ಮತ್ತು ತಿನಿಸುಗಳನ್ನು ಬುಕ್ ಮಾಡಿ ಮನೆಗೆ ತರಿಸಿಕೊಳ್ಳುವ ಅವಕಾಶ ಕಲ್ಪಿಸಲಾಗಿದೆ ಎಂದು ಅರೋಮ ಬೇಕರಿ ವ್ಯವಸ್ಥಾಪಕ ಸುನಿಲ್ ತಿಳಿಸಿದರು.

ಆ್ಯಪ್‌ನಲ್ಲಿ ಮೊದಲ ಆರ್ಡರ್‌ಗೆ ಶೇ 50ರಷ್ಟು ರಿಯಾಯಿತಿ ನೀಡಲಾಗುತ್ತದೆ. ಮುಂದಿನ 1 ವರ್ಷಗಳ ಕಾಲ ಈ ಆ್ಯಪ್‌ನಿಂದ ಬರುವ ಆದಾಯದ ಶೇ 10ರಷ್ಟನ್ನು ಕೊರೊನಾ ನಿಯಂತ್ರಿಸಲು ಹೋರಾಡಿದವರಿಗೆ ನೀಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ಆ್ಯಂಡಾಯ್ಡ್ ಬಳಕೆದಾರರಿಗೆ https://bit.ly/3gFGmpT ಹಾಗೂ ಆ್ಯಪಲ್ ಬಳಕೆದಾರರಿಗೆ https://apple.co/3qRdik8 ಲಿಂಕ್ ಮೂಲಕ ಆ್ಯಪ್ ಪಡೆಯಬಹುದು. ಮತ್ತಷ್ಟು ಮಾಹಿತಿಗಾಗಿ www.aromabakers.com ನೋಡಬಹುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.