ADVERTISEMENT

ವಾರಾಂತ್ಯ ಕರ್ಫ್ಯೂವಿಗೆ ಮೈಸೂರಿನಲ್ಲಿ ವಿರೋಧ: ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2021, 6:22 IST
Last Updated 21 ಆಗಸ್ಟ್ 2021, 6:22 IST
   

ಮೈಸೂರು: ವಾರಾಂತ್ಯ ಕರ್ಫ್ಯೂ ವಿರೋಧಿಸಿ ನಗರದಲ್ಲಿ ವ್ಯಾಪಾರಸ್ಥರು ಕಪ್ಪು ಪಟ್ಟಿ ಧರಿಸಿ ಶನಿವಾರ ತಮ್ಮ ತಮ್ಮ ಅಂಗಡಿಗಳ ಮುಂದೆ ಪ್ರತಿಭಟನೆ ನಡೆಸಿದರು.

ಇಲ್ಲಿನ ಸಂತೇಪೇಟೆ ಹಾಗೂ ದೇವರಾಜ ಅರಸು ರಸ್ತೆಯ‌ ಅಂಗಡಿ ಮಾಲೀಕರು ಮೈಸೂರು ಸಂಘ ಸಂಸ್ಥೆಗಳ ಒಕ್ಕೂಟದ ನೇತೃತ್ವದಲ್ಲಿ ವಾರಾಂತ್ಯ ಕರ್ಫ್ಯು ತೆಗೆಯಬೇಕು ಎಂದು ಆಗ್ರಹಿಸಿದರು.

ಗಡಿ ಜಿಲ್ಲೆಗಳಲ್ಲಿ ಸರ್ಕಾರ ವಿಧಿಸಿರುವ ವಾರಾಂತ್ಯ ಕರ್ಫ್ಯೂ ಸತತ ಮೂರನೇ ವಾರ ಮುಂದುವರಿದಿದೆ. ಇದಕ್ಕೆ ಹೋಟೆಲ್ ಮಾಲೀಕರು, ಅಂಗಡಿ ಮಾಲೀಕರು ಸೇರಿದಂತೆ ಹಲವು ವ್ಯಾಪಾರಸ್ಥರು ವಿರೋಧಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.