ADVERTISEMENT

ಗ್ರಾಮಕ್ಕೆ ನುಗ್ಗಿದ ಆನೆ; ಅರಣ್ಯ ಸಿಬ್ಬಂದಿಗೆ ಗ್ರಾಮಸ್ಥರ ಥಳಿತ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2022, 4:56 IST
Last Updated 20 ಸೆಪ್ಟೆಂಬರ್ 2022, 4:56 IST
ಬೂದನೂರು ಗ್ರಾಮದಲ್ಲಿ ಅಡ್ಡಾದಿಡ್ಡಿಯಾಗಿ ಓಡಾಡಿದ ಸಲಗ
ಬೂದನೂರು ಗ್ರಾಮದಲ್ಲಿ ಅಡ್ಡಾದಿಡ್ಡಿಯಾಗಿ ಓಡಾಡಿದ ಸಲಗ   

ಎಚ್.ಡಿ.ಕೋಟೆ (ಮೈಸೂರು ಜಿಲ್ಲೆ): ತಾಲ್ಲೂಕಿನ ಕಾಡಂಚಿನ ಗ್ರಾಮ ಬೂದನೂರಿಗೆ ಸಲಗವೊಂದು ಸೋಮವಾರ ಬೆಳಿಗ್ಗೆ ನುಗ್ಗಿದ್ದು, ಹಲವು ಮನೆಗಳಿಗೆ ಹಾನಿ ಮಾಡಿದೆ. ಅದರಿಂದ ಆಕ್ರೋಶಗೊಂಡ ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿದ ಅರಣ್ಯ ಇಲಾಖೆ ಸಿಬ್ಬಂದಿಯನ್ನು ಥಳಿಸಿದ್ದಾರೆ.ಗನ್‌ ಅನ್ನು ಕೂಡ ಮುರಿದು ಹಾಕಿದ್ದಾರೆ.

ಈ ಸಂಬಂಧ ಎಚ್‌.ಡಿ.ಕೋಟೆ ಪೊಲೀಸ್‌ ಠಾಣೆಗೆ ಅರಣ್ಯ ಇಲಾಖೆ ದೂರು ನೀಡಿದೆ.

ವಿಡಿಯೊ ವೈರಲ್‌:ಕಲ್ಲುಗಳನ್ನು ಆನೆಯತ್ತ ಎಸೆದು ಗ್ರಾಮದಿಂದ ಹೊರವಲಯಕ್ಕೆ ಅಟ್ಟಲು ಜನರು ಗುಂಪಾಗಿ ಸಾಗುತ್ತಿರುವ ವಿಡಿಯೊ ವೈರಲ್ ಆಗಿದೆ. ಜನರ ಕೂಗಾಟ ಮತ್ತು ಚೀರಾಟದಿಂದ ಸಲಗವುಗಾಬರಿಯಾಗಿ ಬೀದಿಗಳಲ್ಲಿ ಸುತ್ತಾಡಿರುವ ದೃಶ್ಯವೂ ಸೆರೆಯಾಗಿದೆ‌.

ADVERTISEMENT

ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಪಟಾಕಿ ಸಿಡಿಸಿ ಸಲಗವನ್ನು ಕಾಡಿಗಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.