ರೈಲು
ಮೈಸೂರು: ದಸರಾ, ದೀಪಾವಳಿ ಮತ್ತು ಚಟ್ ಹಬ್ಬದ ಅವಧಿಯಲ್ಲಿ ಪ್ರಯಾಣಿಕರ ದಟ್ಟಣೆ ಸರಿದೂಗಿಸಲು, ಸಿಕಂದರಾಬಾದ್–ಮೈಸೂರು –ಸಿಕಂದರಾಬಾದ್ ವಿಶೇಷ ರೈಲುಗಳ ಸಂಚಾರವನ್ನು ಈ ಮೊದಲಿನ ಸಮಯ, ನಿಲ್ದಾಣಗಳು ಮತ್ತು ಬೋಗಿ ವಿನ್ಯಾಸದಲ್ಲೇ ಮುಂದುವರಿಸುವುದಾಗಿ ದಕ್ಷಿಣ ಮಧ್ಯ ರೈಲ್ವೆ ತಿಳಿಸಿದೆ.
ರೈಲು ಸಂಖ್ಯೆ 07033 ಸಿಕಂದರಾಬಾದ್ – ಮೈಸೂರು ವಿಶೇಷ ರೈಲು ಸೆ.1ರಿಂದ ಅ.31ರವರೆಗೆ ಸೋಮವಾರ ಮತ್ತು ಶುಕ್ರವಾರ ಒಟ್ಟು 17 ಟ್ರಿಪ್ ಕಾರ್ಯಾಚರಣೆ ನಡೆಸಲಾಗುವುದು. ಆದರೆ, ಸೆ.29ರಂದು ಸಿಕಂದರಾಬಾದ್‌ನಿಂದ ಸಂಚರಿಸುವುದಿಲ್ಲ.
ರೈಲು ಸಂಖ್ಯೆ 07034 ಮೈಸೂರು – ಸಿಕಂದರಾಬಾದ್ ವಿಶೇಷ ರೈಲು ಸೆ.2ರಿಂದ ನ.1ರವರೆಗೆ ಮಂಗಳವಾರ ಮತ್ತು ಶನಿವಾರ ಒಟ್ಟು 17 ಟ್ರಿಪ್ ಕಾರ್ಯಾಚರಣೆ ನಡೆಸಲಿದೆ. ಆದರೆ, ಸೆ.30ರಂದು ಮೈಸೂರಿನಿಂದ ಸಂಚರಿಸುವುದಿಲ್ಲ ಎಂದು ನೈರುತ್ಯ ರೈಲ್ವೆ ಮೈಸೂರು ವಿಭಾಗದ ವಿಭಾಗೀಯ ಹಣಕಾಸು ವ್ಯವಸ್ಥಾಪಕ ಹಾಗೂ ಪಿಆರ್‌ಒ ಪೃಥ್ವಿ ಎಸ್.ಹುಲ್ಲಕಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.