ADVERTISEMENT

ಮೈಸೂರು: ದಸರಾ ದೀಪಾಲಂಕಾರಕ್ಕೆ ತೆರೆ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2025, 7:25 IST
Last Updated 13 ಅಕ್ಟೋಬರ್ 2025, 7:25 IST
<div class="paragraphs"><p>ಸಯ್ಯಾಜಿರಾವ್‌ ರಸ್ತೆಯಲ್ಲಿನ ಹಸಿರು ಚಪ್ಪರವು ದೀಪಾಲಂಕಾರದಿಂದ ಕಂಗೊಳಿಸಿದ ಪರಿ&nbsp; </p></div>

ಸಯ್ಯಾಜಿರಾವ್‌ ರಸ್ತೆಯಲ್ಲಿನ ಹಸಿರು ಚಪ್ಪರವು ದೀಪಾಲಂಕಾರದಿಂದ ಕಂಗೊಳಿಸಿದ ಪರಿ 

   

ಪ್ರಜಾವಾಣಿ ಚಿತ್ರ 

ಮೈಸೂರು: ದಸರೆ ಅಂಗವಾಗಿ ನಗರದಾದ್ಯಂತ ಅಳವಡಿಸಿದ್ದ ವಿದ್ಯುತ್‌ ದೀಪಾಲಂಕಾರವು ಭಾನುವಾರ ಕೊನೆಗೊಂಡಿತು.

ADVERTISEMENT

ಸೆ. 22ರಂದು ದಸರಾ ಉದ್ಘಾಟನೆಗೊಂಡಿದ್ದು, ಅಂದಿನಿಂದ ಈವರೆಗೂ ನಗರವು ವಿದ್ಯುತ್ ದೀಪಗಳ ಬೆಳಕಿನಲ್ಲಿ ಹೊಳೆಯುತ್ತಿತ್ತು. ಅ. 2ರಂದೇ ವಿಜಯದಶಮಿ ಮೂಲಕ ದಸರಾ ಕೊನೆಗೊಂಡರೂ ಪ್ರವಾಸಿಗರ ಆಕರ್ಷಣೆಯ ಸಲುವಾಗಿ ಅ. 12ರವರೆಗೂ ದೀಪಾಲಂಕಾರವನ್ನು ಸೆಸ್ಕ್‌ ವಿಸ್ತರಿಸಿತ್ತು.

ಈ ಬಾರಿ ನಗರದ 136 ಕಿ.ಮೀ. ರಸ್ತೆಗಳು ಹಾಗೂ 118 ವೃತ್ತಗಳಲ್ಲಿ ದೀಪಾಲಂಕಾರ ಮಾಡಲಾಗಿತ್ತು. ಪ್ರಮುಖ ವೃತ್ತಗಳಲ್ಲಿ ಎಲ್ಇಡಿ ಬಲ್ಬ್‌ಗಳಿಂದ 80 ವಿವಿಧ ಪ್ರತಿಕೃತಿಗಳನ್ನು ನಿರ್ಮಿಸಲಾಗಿತ್ತು. ರಾತ್ರಿ ದೀಪಗಳ ಬೆಳಕಿನಲ್ಲಿ ಹೊಳೆಯುವ ನಗರಿಯನ್ನು ಕಣ್ತುಂಬಿಕೊಳ್ಳಲು ಲಕ್ಷಾಂತರ ಮಂದಿ ಮೈಸೂರಿಗೆ ಭೇಟಿ ನೀಡಿದ್ದರು.

ಸಯ್ಯಾಜಿರಾವ್‌ ರಸ್ತೆ, ಇರ್ವಿನ್ ರಸ್ತೆ, ಅಲ್ಬರ್ಟ್‌ ವಿಕ್ಟರ್‌ ರಸ್ತೆ, ಜೆಎಲ್‌ಬಿ ರಸ್ತೆ, ಚಾಮರಾಜ ಜೋಡಿರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳು ದೀಪಗಳ ಬೆಳಕಲ್ಲಿ ಹೊಳೆದವು.

ಕೆ.ಆರ್‌.ವೃತ್ತ, ಚಾಮರಾಜ ವೃತ್ತ, ಜಯಚಾಮರಾಜ ವೃತ್ತ, ರಾಮಸ್ವಾಮಿ ವೃತ್ತ, ಗನ್‌ಹೌಸ್‌ ಸೇರಿದಂತೆ ನಗರದ ಹೃದಯಭಾಗದ ವೃತ್ತಗಳನ್ನೂ ವಿಶೇಷವಾಗಿ ಅಲಂಕರಿಸಿದ್ದು, ಜನರು ವಾಹನಗಳನ್ನು ನಿಲ್ಲಿಸಿ, ಫೋಟೊ ತೆಗೆದುಕೊಳ್ಳುವ ದೃಶ್ಯ ಸಾಮಾನ್ಯವಾಗಿತ್ತು.

ದೀಪಾಲಂಕಾರದ ವೀಕ್ಷಣೆಗೆಂದೇ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು ನಿತ್ಯ ‘ಅಂಬಾರಿ’ ಬಸ್‌ಗಳ ವ್ಯವಸ್ಥೆ ಮಾಡಿದ್ದು, ಸದ್ಯ ಈ ಸೇವೆಯೂ ಮುಕ್ತಾಯಗೊಂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.