ADVERTISEMENT

ಮೈಸೂರು: ಗ್ರಾಮ ಸತ್ಯಾಗ್ರಹಕ್ಕೆ ನಿರ್ಧಾರ

ಬದನವಾಳು ಸತ್ಯಾಗ್ರಹ ಸಮಿತಿಯ ಸಭೆಯಲ್ಲಿ ನಿರ್ಣಯ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2026, 23:45 IST
Last Updated 14 ಫೆಬ್ರುವರಿ 2026, 23:45 IST
ಮೈಸೂರಿನ ಭಾರತೀಯ ಶೈಕ್ಷಣಿಕ ರಂಗಭೂಮಿ ಸಂಸ್ಥೆ ಸಭಾಂಗಣದಲ್ಲಿ ಬದನವಾಳು ಸತ್ಯಾಗ್ರಹ ಸಮಿತಿಯು ಆಯೋಜಿಸಿದ್ದ ಸಭೆಯಲ್ಲಿ ಹೋರಾಟಗಾರರು ಭಾಗವಹಿಸಿದ್ದರು
ಮೈಸೂರಿನ ಭಾರತೀಯ ಶೈಕ್ಷಣಿಕ ರಂಗಭೂಮಿ ಸಂಸ್ಥೆ ಸಭಾಂಗಣದಲ್ಲಿ ಬದನವಾಳು ಸತ್ಯಾಗ್ರಹ ಸಮಿತಿಯು ಆಯೋಜಿಸಿದ್ದ ಸಭೆಯಲ್ಲಿ ಹೋರಾಟಗಾರರು ಭಾಗವಹಿಸಿದ್ದರು   

ಮೈಸೂರು: ಜಿಲ್ಲೆಯಲ್ಲಿ 2015ರಲ್ಲಿ ನಡೆದಿದ್ದ ಬದನವಾಳು ಸತ್ಯಾಗ್ರಹವನ್ನು ಗ್ರಾಮ ಸತ್ಯಾಗ್ರಹವಾಗಿ ಮರುನಾಮಕರಣ ಮಾಡಿ ಮುಂದುವರಿಸಲು ಹೋರಾಟಗಾರರು ನಿರ್ಣಯಿಸಿದರು.

ಇಲ್ಲಿನ ಭಾರತೀಯ ಶೈಕ್ಷಣಿಕ ರಂಗಭೂಮಿ ಸಂಸ್ಥೆ ಸಭಾಂಗಣದಲ್ಲಿ ಬದನವಾಳು ಸತ್ಯಾಗ್ರಹ ಸಮಿತಿಯು ಆಯೋಜಿಸಿದ್ದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು.

ಗ್ರಾಮ ವ್ಯವಸ್ಥೆ, ಕರಕುಶಲ ಉತ್ಪನ್ನಗಳ ಆರ್ಥಿಕತೆ, ಸಹಜ ಕೃಷಿ, ಸ್ಥಳೀಯ ಸಂಸ್ಕೃತಿ, ಮಾತೃಭಾಷೆಗಳು ಹಾಗೂ ದುರ್ಬಲಗೊಂಡಿರುವ ಪ್ರಾಕೃತಿಕ ಸಂಪನ್ಮೂಲವನ್ನು ಮೇಲೆತ್ತಬಲ್ಲ ಅಹಿಂಸಾತ್ಮಕ ಚಳವಳಿ ಮುಂದುವರಿಸಲು ನಿರ್ಧರಿಸಲಾಯಿತು. ಬದನವಾಳು ಖಾದಿ ಕೇಂದ್ರವನ್ನು ಗಾಂಧಿ ಅಶ್ರಮವಾಗಿ ನಮ್ಮ ಶ್ರಮದಿಂದ ರೂಪಿಸಬೇಕು ಎಂಬ ಸಂಕಲ್ಪವನ್ನು ಹೋರಾಟಗಾರರು ಮಾಡಿದರು.

ADVERTISEMENT

ರಂಗಕರ್ಮಿ ಪ್ರಸನ್ನ ‘ಬದನವಾಳು ಖಾದಿ ಕೇಂದ್ರವನ್ನು ಗಾಂಧಿ ಅಶ್ರಮವಾಗಿ ರೂಪಿವುದರೊಂದಿಗೆ ಗ್ರಾಮಗಳಲ್ಲಿರುವ ಗಾಂಧಿ ಆಶಯ ಕೇಂದ್ರಗಳನ್ನೂ ಗಟ್ಟಿಗೊಳಿಸುವ ಕೆಲಸ ನಡೆಯಬೇಕು’ ಎಂದರು.

ಗಾಂಧಿವಾದಿ ಜಿ.ಎಸ್. ಜಯದೇವ ಮಾತನಾಡಿ, ‘ಸರ್ಕಾರ ಬದನವಾಳಿಗಾಗಿ ₹ 40 ಕೋಟಿ ಮಂಜೂರು ಮಾಡಿದೆ. ಅದನ್ನು ಬಳಸಿ ಬದನವಾಳು ಗ್ರಾಮ ಕೇಂದ್ರವಾಗಿಟ್ಟು ಸುತ್ತಲಿನ ಹಳ್ಳಿಗಳ ಸಮುಚ್ಛಯದಲ್ಲಿ ಸರ್ವೋದಯದ ಆರ್ಥಿಕತೆ ಹುಟ್ಟುಹಾಕುವ ಆಶಯ ಮುಂದಿನ ಚಳವಳಿಗಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.