
ಮೈಸೂರು: ‘ಸಮಾಜ ಪರಿವರ್ತನೆಗೆ ಶ್ರಮಿಸಿದ ಅಪರೂಪದ ವ್ಯಕ್ತಿ ದೇವರಾಜ ಅರಸು’ ಎಂದು ವಿಧಾನಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ ಸ್ಮರಿಸಿದರು.
ನಗರದ ಕೆ.ಆರ್.ವನಂನ ಶ್ರೀರಾಮ ಸೇವಾ ಅರಸು ಮಂಡಳಿಯಲ್ಲಿ ಅರಸು ಜಾಗೃತಿ ಅಕಾಡೆಮಿ ಚಾರಿಟಬಲ್ ಟ್ರಸ್ಟ್‌ನಿಂದ ಆಯೋಜಿಸಿದ್ದ ಬಿಇಎಲ್ ನಿವೃತ್ತ ಪ್ರಧಾನ ವ್ಯವಸ್ಥಾಪಕ ಮಲ್ಲರಾಜ ಅರಸ್ ರಚನೆಯ ‘ಚುಟುಕು ತಾರೆಗಳು’ ಕೃತಿ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
‘ದೇಶದಲ್ಲಿಯೇ ವಿಶೇಷ ಕಾರ್ಯಕ್ರಮಗಳ ಮೂಲಕ ಅಹಿಂದ ಸಮುದಾಯಕ್ಕೆ ಅನೇಕ ಅವಕಾಶ ಮಾಡಿಕೊಟ್ಟಿದ್ದರು. ರಾಜ್ಯದಲ್ಲಿ ಹಲವು ಬದಲಾವಣೆಗಳನ್ನು ಮಾಡಿ, ಅಭಿವೃದ್ಧಿಯ ಹರಿಕಾರ ಎನ್ನಿಸಿಕೊಂಡರು. ಅವರಂತೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಕೆಲಸ ಮಾಡುತ್ತಿರುವುದು ಶ್ಲಾಘನೀಯ’ ಎಂದರು.
ಕೃತಿ ಬಿಡುಗಡೆಗೊಳಿಸಿ ಎಸ್.ಷಡಕ್ಷರಿ, ‘ಚುಟುಕು ಸಾಹಿತ್ಯದ ಮಹತ್ವವನ್ನು ಯುವ ಸಾಹಿತಿಗಳು ತಿಳಿಯಬೇಕಿದೆ. ಎಂ.ಜಿ.ಆರ್.ಅರಸ್ ಅವರಿಂದ ಚುಟುಕು ಸಾಹಿತ್ಯ ಬೆಳೆಯುತ್ತಿದೆ’ ಎಂದರು.
ಕೃತಿ ಕುರಿತು ಸಾಹಿತಿ ನಾ.ದಿವಾಕರ ಮಾತನಾಡಿದರು.
ಕೆಇಬಿ ನಿವೃತ್ತ ಎಂಜಿನಿಯರ್ ಕೆ.ಆರ್.ಲಕ್ಷ್ಮಿಕಾಂತ, ಬಿಇಎಲ್ ನಿವೃತ್ತ ನಿರ್ದೇಶಕ ಎಚ್.ಎನ್.ರಾಮಕೃಷ್ಣ, ಅರಸು ಜಾಗೃತಿ ಅಕಾಡೆಮಿ ಚಾರಿಟಬಲ್ ಟ್ರಸ್ಟ್ ಕಾರ್ಯದರ್ಶಿ ಎಂ.ಜಿ.ಆರ್.ಅರಸ್, ಮಂಡಳಿ ಅಧ್ಯಕ್ಷ ಸುಂದರರಾಜೇ ಅರಸ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.