ADVERTISEMENT

ಹುಣಸೂರು | ಸಾಲಬಾಧೆ: ರೈತ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 7 ಜುಲೈ 2025, 2:20 IST
Last Updated 7 ಜುಲೈ 2025, 2:20 IST
ಪುಟ್ಟ ಸ್ವಾಮಾಚಾರಿ
ಪುಟ್ಟ ಸ್ವಾಮಾಚಾರಿ   

ಹುಣಸೂರು: ಸಾಲಬಾಧೆಯಿಂದ ವಿಷ ಸೇವಿಸಿ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶ್ರವಣನಹಳ್ಳಿ ಪ್ರಗತಿಪರ ರೈತ ಪುಟ್ಟಸ್ವಾಮಾಚಾರಿ (50) ಭಾನುವಾರ ಮೃತಪಟ್ಟಿದ್ದಾರೆ, ಇವರಿಗೆ ಪತ್ನಿ ಮತ್ತು ಇಬ್ಬರು ಪುತ್ರಿಯರಿದ್ದಾರೆ. 

ಇವರು ತಂಬಾಕು ಬೇಸಾಯಕ್ಕೆ ಫೈನಾನ್ಸ್‌ ಕಂಪನಿಯೊಂದರಿಂದ ಸಾಲ ಪಡೆದಿದ್ದರು. ಸಾಲ ಮರುಪಾವತಿಸದಿದ್ದುದರಿಂದ ಕಂಪನಿ ಸಿಬ್ಬಂದಿ ಮನೆಗೆ ಬಂದು ಸಾಲ ಪಾವತಿಸುವಂತೆ ಒತ್ತಡ ಹಾಕುತ್ತಿದ್ದರು. ಇದರಿಂದ ವಿಷ ಸೇವಿಸಿದ್ದರು. ವಿಷಯ ತಿಳಿದ ಕುಟುಂಬ ಸದಸ್ಯರು ಕೆ.ಆರ್.ನಗರ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದರು. ಮನೆಮಂದಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಬಿಳಿಕೆರೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT