ಮೈಸೂರು: ‘ವೈಜ್ಞಾನಿಕ ಆಲೋಚನೆಗಳನ್ನು ನಾಟಕದ ಮೂಲಕ ಸರಳವಾಗಿ ದಾಟಿಸಿ ಮನಗೆದ್ದಿರುವ ‘ಮೈಸೂರು ವಿಜ್ಞಾನ ನಾಟಕೋತ್ಸವ’ ಜುಲೈ 24ರಿಂದ 27ರವರೆಗೆ ರಾಮಕೃಷ್ಣನಗರದ ರಮಾಗೋವಿಂದ ರಂಗಮಂದಿರದಲ್ಲಿ ನಡೆಯಲಿದೆ’ ಎಂದು ‘ಮೈಸೂರು ವಿಜ್ಞಾನ ನಾಟಕೋತ್ಸವ ಟ್ರಸ್ಟ್’ ಸದಸ್ಯ ಮಾಧವ ಖರೆ ಹೇಳಿದರು.
ನಗರದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಭಾರತೀಯ ಖಗೋಳ ಭೌತವಿಜ್ಞಾನ ಸಂಸ್ಥೆ, ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ಸಹಯೋಗದಲ್ಲಿ ಆಯೋಜಿಸಿರುವ 8ನೇ ಆವೃತ್ತಿಯ ಉತ್ಸವವನ್ನು 24ರ ಸಂಜೆ 4.30ಕ್ಕೆ ಭಾರತೀಯ ಖಗೋಳ ಭೌತವಿಜ್ಞಾನ ಸಂಸ್ಥೆಯ ನಿರ್ದೇಶಕಿ ಪ್ರೊ.ಅನ್ನಪೂರ್ಣಿ ಸುಬ್ರಹ್ಮಣ್ಯಂ ಉದ್ಘಾಟಿಸುವರು. ನಾಟಕಕಾರ ನೀಲಾಂಜನ ಚೌಧರಿ ಪಾಲ್ಗೊಳ್ಳುವರು’ ಎಂದರು.
‘ನಿತ್ಯ ಸಂಜೆ 6.30ಕ್ಕೆ ನಾಟಕಗಳು ನಡೆಯಲಿದ್ದು, ಕಾರ್ಯಕ್ರಮಗಳಿಗೆ ಉಚಿತ ಪ್ರವೇಶವಿದ್ದು, ನಾಟಕದ ಟಿಕೆಟ್ ದರ ₹ 100’ ಎಂದು ತಿಳಿಸಿದರು.
ಸಂವಾದ, ರಸಪ್ರಶ್ನೆ:
‘ನಾಟಕಕ್ಕೂ ಮೊದಲು ನಿತ್ಯ ಸಂಜೆ 5ಕ್ಕೆ ಸಂವಾದ, ರಸಪ್ರಶ್ನೆ ಹಾಗೂ ಗಣಿತ–ಕುಣಿತ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಖಗೋಳ ವಿಜ್ಞಾನ– ಮಾನವ ಅವರೋಹಣ, 2025ರಲ್ಲಿ ಭಾರತೀಯ ಮಹಿಳಾ ವಿಜ್ಞಾನಿ, ಆಕಸ್ಮಿಕ ವಿಜ್ಞಾನದ ಕುರಿತು ಕ್ರಮವಾಗಿ ನೀರುಜ್ ಮೋಹನ್ ರಾಮಾನುಜಂ, ನಂದಿತಾ ಜಯರಾಜ್ ಮತ್ತು ಬಿತಾಸ್ತಾ ದಾಸ್, ಬರ್ಟಿ ಆಶ್ಲಿ ಮಾತನಾಡುವರು’ ಎಂದು ಹೇಳಿದರು.
ಗೋಷ್ಠಿಯಲ್ಲಿ ಕೊಳ್ಳೇಗಾಲ ಶರ್ಮ, ಅಮೋಘವರ್ಷ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.