ಜಿ. ಪರಮೇಶ್ವರ
ಮೈಸೂರು: ‘ಕರ್ನಾಟಕ ‘ಉಡ್ತಾ ಪಂಜಾಬ್’ ಆಗಲು ಬಿಡುವುದಿಲ್ಲ. ಡ್ರಗ್ಸ್ ವಿಚಾರದಲ್ಲಿ ರಾಜ್ಯ ಸರ್ಕಾರ ಈಗಾಗಲೇ ಕಠಿಣಕ್ರಮ ಕೈಗೊಳ್ಳುತ್ತಿದೆ’ ಎಂದು ಗೃಹ ಸಚಿವ ಡಾ. ಡಾ.ಜಿ.ಪರಮೇಶ್ವರ ಹೇಳಿದರು.
ಶನಿವಾರ ಇಲ್ಲಿನ ಸಿದ್ದಾರ್ಥನಗರ ಸಂಚಾರ ಪೊಲೀಸ್ ಠಾಣೆಯ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿ, ‘ಡ್ರಗ್ಸ್ ವಿರುದ್ಧ ಸರ್ಕಾರ ಈಗಾಗಲೇ ಸಮರ ಸಾರಿದೆ.ಗೊಂಡಿರುವ ಕ್ರಮಗಳ ಕುರಿತು ಬಹಿರಂಗವಾಗಿ ಹೇಳಲಾಗದು’ ಎಂದರು.
‘ಮಹಾರಾಷ್ಟ್ರ, ಗುಜರಾತ್‌ನಲ್ಲಿ ಡ್ರಗ್ಸ್ ಉತ್ಪಾದನಾ ಘಟಕಗಳು ಪತ್ತೆಯಾಗಿವೆ. ಆದರೆ ಮೈಸೂರಿನಲ್ಲಿ ಯಾವುದೇ ಡ್ರಗ್ಸ್ ಸಿಕ್ಕಿಲ್ಲ. ಎನ್‌ಸಿಬಿ ನ್ಯಾಯಾಲಯಕ್ಕೆ ಸಲ್ಲಿಸಿರುವ ಮಾಹಿತಿಯಲ್ಲಿ ಡ್ರಗ್ಸ್ ಸಿಕ್ಕಿಲ್ಲ ಎಂದಿದೆ. ಆದರೆ ಪತ್ರಿಕಾ ಹೇಳಿಕೆಯಲ್ಲಿ, ಮೈಸೂರಿನಲ್ಲಿ ₹10 ಕೋಟಿ ಡ್ರಗ್ಸ್ ಸಿಕ್ಕಿದೆ ಎಂದು ಹೇಳಿದೆ. ದಾಳಿ ನಡೆಯುವಾಗ ನಮ್ಮ ಅಧಿಕಾರಿಗಳೂ ಜೊತೆಗಿದ್ದರು. ಯಾಕೆ ಈ ರೀತಿ ದ್ವಂದ್ವ ಹೇಳಿಕೆ ನೀಡಿದೆಯೋ ಗೊತ್ತಿಲ್ಲ’ ಎಂದರು.
‘ಮುನ್ನೆಚ್ಚರಿಕೆ ಕ್ರಮವಾಗಿ, ರಾಜ್ಯದ ಪ್ರತಿ ಕೆಮಿಕಲ್ ಕಾರ್ಖಾನೆಯನ್ನು 15 ದಿನಕ್ಕೊಮ್ಮೆ ತಪಾಸಣೆಗೆ ಸೂಚಿಸಿದ್ದೇನೆ. ಮಾದಕವಸ್ತು ಸಿಕ್ಕರೆ ಸ್ಥಳೀಯ ಠಾಣೆಯ ಪೊಲೀಸರೇ ಹೊಣೆ’ ಎಂದು ಎಚ್ಚರಿಸಿದರು.
ಅಕ್ರಮವಾಸಿಗಳ ವಿರುದ್ಧ ಕ್ರಮ: ‘ಬಾಂಗ್ಲಾದೇಶಿಯರು ಸೇರಿ ರಾಜ್ಯದಲ್ಲಿ ಅಕ್ರಮವಾಗಿ ನೆಲೆಸಿರುವ ವಿದೇಶಿಯರ ಪತ್ತೆಗೆ ಸೂಚಿಸಲಾಗಿದೆ. ಮನೆ, ಕಾಫಿ ತೋಟ, ಕಟ್ಟಡ ಸೇರಿ ಎಲ್ಲ ಕಡೆ ಪರಿಶೀಲನೆ ನಡೆಯಲಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.