
ಪ್ರಜಾವಾಣಿ ವಾರ್ತೆ
ಪಿರಿಯಾಪಟ್ಟಣ: ಸ್ನಾನದ ಕೋಣೆಯಲ್ಲಿದ್ದ ಗ್ಯಾಸ್ ಗೀಸರ್‌ನಿಂದ ಕಾರ್ಬನ್ ಮೋನಾಕ್ಸೈಡ್ ಸೋರಿಕೆಯಾಗಿ ಉಸಿರುಗಟ್ಟಿ ಸೋದರಿಯರಾದ ಗುಲ್ಪಮ್ ತಾಜ್ (23) ಮತ್ತು ಸಿಮ್ರಾನ್ ತಾಜ್ (21) ಗುರುವಾರ ರಾತ್ರಿ ಮೃತಪಟ್ಟರು.
‘ಪಟ್ಟಣದ ಕಾವಾಡಗೇರಿಯಲ್ಲಿರುವ ಮನೆಯಲ್ಲಿ ರಾತ್ರಿ 7ರ ಸಮಯದಲ್ಲಿ ಒಟ್ಟಿಗೆ ಸ್ನಾನದ ಕೋಣೆಗೆ ತೆರಳಿದ್ದಾಗ ದುರ್ಘಟನೆ ಸಂಭವಿಸಿದೆ. ಕೋಣೆಯಲ್ಲಿ ಕಿಟಕಿ ಇರಲಿಲ್ಲ’ ಎಂದು ಅವರ ತಂದೆ ಅಲ್ತಾಫ್ ಪಾಷಾ ಪಟ್ಟಣ ಠಾಣೆಗೆ ದೂರು ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.