
ಪ್ರಜಾವಾಣಿ ವಾರ್ತೆ
ಪುಷ್ಪಾ ಅಮರನಾಥ್
ಮೈಸೂರು: ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷೆ ಮೈಸೂರಿನ ಪುಷ್ಪಾ ಅಮರನಾಥ್ ದುಬೈನಲ್ಲಿ ಸಿಲುಕಿದ್ದಾರೆ.
‘ಪತ್ರಿಕೆಯೊಂದು ಆಯೋಜಿಸಿದ್ದ ಪ್ರಶಸ್ತಿ ಪ್ರದಾನ ಸಮಾರಂಭವೊಂದರಲ್ಲಿ ಪಾಲ್ಗೊಳ್ಳಲೆಂದು ದುಬೈಗೆ ಬಂದಿದ್ದೆ. ಇಸ್ರೇಲ್ - ಇರಾನ್ ನಡುವಿನ ಉದ್ವಿಗ್ನ ಪರಿಸ್ಥಿತಿಯಿಂದಾಗಿ ದುಬೈನಲ್ಲಿ ವಿಮಾನಗಳ ಹಾರಾಟ ಸ್ಥಗಿತಗೊಂಡಿದೆ. ನಾವು ಬರಬೇಕಿದ್ದ ವಿಮಾನ ರದ್ದಾಗಿದೆ. ಹೀಗಾಗಿ, ಇಲ್ಲೇ ಉಳಿಯುವಂತಾಗಿದೆ. ಹೋಟೆಲ್‌ವೊಂದರಲ್ಲಿ ತಂಗಿರುವ ನಾವೆಲ್ಲರೂ ಸುರಕ್ಷಿತವಾಗಿದ್ದೇವೆ. ಏನೂ ತೊಂದರೆ ಇಲ್ಲ’ ಎಂದು ವಿಡಿಯೊ ಸಂದೇಶದಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.