ADVERTISEMENT

ಅಶ್ವತ್ಥ್‌ ಕದಂಬಗೆ ಅಭಿನಂದನೆ

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2024, 16:23 IST
Last Updated 25 ಆಗಸ್ಟ್ 2024, 16:23 IST
ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಪ್ರಸಾಧನ ತಜ್ಞ, ರಂಗಕರ್ಮಿ ಡಿ. ಅಶ್ವತ್ಥ್‌ ಕದಂಬ- ಗಾಯತ್ರಿ ದಂಪತಿಯನ್ನು ಕದಂಬ ಕಲಾಪೀಠದಿಂದ ಭಾನುವಾರ ಕಲಾಮಂದಿರ ಆವರಣದ ಕಿರುರಂಗಮಂದಿರದಲ್ಲಿ  ಅಭಿನಂದಿಸಲಾಯಿತು– ಪ್ರಜಾವಾಣಿ ಚಿತ್ರ
ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಪ್ರಸಾಧನ ತಜ್ಞ, ರಂಗಕರ್ಮಿ ಡಿ. ಅಶ್ವತ್ಥ್‌ ಕದಂಬ- ಗಾಯತ್ರಿ ದಂಪತಿಯನ್ನು ಕದಂಬ ಕಲಾಪೀಠದಿಂದ ಭಾನುವಾರ ಕಲಾಮಂದಿರ ಆವರಣದ ಕಿರುರಂಗಮಂದಿರದಲ್ಲಿ  ಅಭಿನಂದಿಸಲಾಯಿತು– ಪ್ರಜಾವಾಣಿ ಚಿತ್ರ   

ಮೈಸೂರು: ‘ಪ್ರಸಾಧನ ತಜ್ಞ, ರಂಗಕರ್ಮಿ ಡಿ. ಅಶ್ವತ್ಥ್‌ ಕದಂಬ ಅವರು ವ್ಯಕ್ತಿಪ್ರಜ್ಞೆಯ ಜೊತೆಗೆ ಸಮಷ್ಟಿ ಪ್ರಜ್ಞೆಯುಳ್ಳವರು’ ಎಂದು ಚಲನಚಿತ್ರ ನಟ ಮಂಡ್ಯ ರಮೇಶ್‌ ಶ್ಲಾಘಿಸಿದರು.

ಕದಂಬ ಕಲಾಪೀಠವು ಡಿ. ಬಸಪ್ಪಾಜಿ ಕದಂಬ ಅವರ 95ನೇ ನೆನಪಿನೋತ್ಸವ, ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಡಿ. ಅಶ್ವತ್ಥ್‌ ಕದಂಬ ಅವರ 75ನೇ ಜನ್ಮದಿನೋತ್ಸವ ಅಂಗವಾಗಿ ಇಲ್ಲಿನ ಕಲಾಮಂದಿರದ ಕಿರುರಂಗಮಂದಿರದಲ್ಲಿ ಭಾನುವಾರ ಅಭಿನಂದಿಸಿ ಅವರು ಮಾತನಾಡಿದರು.

‘ಕದಂಬ ಅವರದ್ದು ಕಲಾಕುಟುಂಬ. ಅವರಲ್ಲಿ ಕಲಾಪ್ರಜ್ಞೆ ರಕ್ತಗತವಾಗಿಯೇ ಬಂದಿದೆ. ಅಶ್ವತ್ಥ್‌ ಅವರು ಸಜ್ಜನಿಕೆ, ವಿನಯವಂತಿಕೆಯುಳ್ಳ ಅಪರೂಪದ ಪ್ರಸಾಧನ ಕಲಾವಿದ. ಎಲ್ಲೇ ಕೆಲಸ ಮಾಡಿದರೂ ಶ್ರದ್ಧೆ ಬಿಡದವರು. ಹೊಸತನ್ನು ಪ್ರಯೋಗ ಮಾಡಿದವರು’ ಎಂದರು.

ADVERTISEMENT

ಪತ್ರಕರ್ತ ಅಂಶಿ ಪ್ರಸನ್ನಕುಮಾರ್‌ ಕಾರ್ಯಕ್ರಮ ಉದ್ಘಾಟಿಸಿದರು. ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕದ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್‌ ಅಧ್ಯಕ್ಷತೆ ವಹಿಸಿದ್ದರು. ರಂಗಕರ್ಮಿ ನಾ. ನಾಗಚಂದ್ರ ಮುಖ್ಯಅತಿಥಿಯಾಗಿದ್ದರು. ಕದಂಬ ಕಲಾಪೀಠದ ಅಧ್ಯಕ್ಷ ಬಿ. ವಿದ್ಯಾಸಾಗರ ಕದಂಬ, ಸ್ಪಂದನ ಸಾಂಸ್ಕೃತಿಕ ಪರಿಷತ್‌ ಅಧ್ಯಕ್ಷ ಟಿ. ಸತೀಶ್‌ ಜವರೇಗೌಡ, ಉಪನ್ಯಾಸಕ ಧನಂಜಯ ಪಾಲ್ಗೊಂಡಿದ್ದರು.

ನಂತರ ಕದಂಬ ಕಲಾಪೀಠವು ಡಿ. ಅಶ್ವತ್ಥ್‌ ಕದಂಬ ನಿರ್ದೇಶನದಲ್ಲಿ ಎನ್‌.ಎಸ್‌. ರಾವ್‌ ವಿರಚಿತ ‘ವಿಷಜ್ಞಾಲೆ’ ನಾಟಕ ಪ್ರದರ್ಶಿಸಿತು. ಬಿ.ವಿದ್ಯಾಸಾಗರ ಕದಂಬ ನಿರ್ಮಾಣದೊಂದಿಗೆ ಪಾತ್ರವನ್ನೂ ನಿರ್ವಹಿಸಿದರು. ನಾಗಲಿಂಗೇಗೌಡ ಸಂಗೀತ ಇತ್ತು. ಇದಕ್ಕೂ ಮುನ್ನ, ಡಿ.ಅಶ್ವತ್ಥ್‌ ಕದಂಬ ಅವರ ರಂಗಸೇವೆ ಕುರಿತು ಸಾಕ್ಷ್ಯಚಿತ್ರ ಪ್ರದರ್ಶಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.