ADVERTISEMENT

ಕನಕದಾಸರ ಚರಿತ್ರೆ ಕನ್ನಡದ ಅಸ್ಮಿತೆ: ಕಾ.ತ.ಚಿಕ್ಕಣ್ಣ ಅಭಿಮತ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2025, 3:11 IST
Last Updated 31 ಆಗಸ್ಟ್ 2025, 3:11 IST
ತಿ.ನರಸೀಪುರ ಪಟ್ಟಣದ ಬೈರಾಪುರ ಮಹಿಳೆಯರ ಸರ್ಕಾರಿ ಪದವಿ‌ ಕಾಲೇಜಿನಲ್ಲಿ ಶುಕ್ರವಾರ ನಡೆದ ಕನಕರ ನಡೆ ನುಡಿ ಉತ್ಸವ ಕಾರ್ಯಕ್ರಮವನ್ನು‌ ಕನಕದಾಸ ಹಾಗೂ ತತ್ವಪದಕಾರರ ಅಧ್ಯಯನ ಕೇಂದ್ರದ ಅಧ್ಯಕ್ಷ ಕಾ.ತ ಚಿಕ್ಕಣ್ಣ ಉದ್ಘಾಟಿಸಿದರು. ಪ್ರಾಂಶುಪಾಲೆ ಬಿ.ಪಿ. ಇಂದಿರಾ, ಡಾ. ಪುರುಷೋತ್ತಮ ಹಾಗೂ‌ ಅಧ್ಯಾಪಕರು ಪಾಲ್ಗೊಂಡಿದ್ದರು
ತಿ.ನರಸೀಪುರ ಪಟ್ಟಣದ ಬೈರಾಪುರ ಮಹಿಳೆಯರ ಸರ್ಕಾರಿ ಪದವಿ‌ ಕಾಲೇಜಿನಲ್ಲಿ ಶುಕ್ರವಾರ ನಡೆದ ಕನಕರ ನಡೆ ನುಡಿ ಉತ್ಸವ ಕಾರ್ಯಕ್ರಮವನ್ನು‌ ಕನಕದಾಸ ಹಾಗೂ ತತ್ವಪದಕಾರರ ಅಧ್ಯಯನ ಕೇಂದ್ರದ ಅಧ್ಯಕ್ಷ ಕಾ.ತ ಚಿಕ್ಕಣ್ಣ ಉದ್ಘಾಟಿಸಿದರು. ಪ್ರಾಂಶುಪಾಲೆ ಬಿ.ಪಿ. ಇಂದಿರಾ, ಡಾ. ಪುರುಷೋತ್ತಮ ಹಾಗೂ‌ ಅಧ್ಯಾಪಕರು ಪಾಲ್ಗೊಂಡಿದ್ದರು   

ತಿ.ನರಸೀಪುರ: ‘ಕನಕದಾಸರ ಸಾಧಕ ಜೀವನ ಕೇವಲ ಚರಿತ್ರೆಯ ವಸ್ತು ಅಲ್ಲ. ಅದು ಕನ್ನಡ ನಾಡಿನ ಅಸ್ಮಿತೆ’ ಎಂದು ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರದ ಅಧ್ಯಕ್ಷ ಕಾ.ತ.ಚಿಕ್ಕಣ್ಣ ಹೇಳಿದರು.

ಪಟ್ಟಣದ ಬೈರಾಪುರ ಮಹಿಳಾ ಸರ್ಕಾರಿ ಪದವಿ ಕಾಲೇಜಿನಲ್ಲಿ ಸಂತಕವಿ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರವು ಕಾಲೇಜಿನ ಸಹಯೋಗದೊಂದಿಗೆ ಶುಕ್ರವಾರ ಆಯೋಜಿಸಿದ್ದ ‘ಕನಕ-ಸಂಸ್ಕೃತಿ-ಸಂಚಲನ’ ಕಾರ್ಯಕ್ರಮದ ಅಂತಿಮ ಘಟ್ಟ ‘ಕನಕ ನಡೆ-ನುಡಿ ಉತ್ಸವ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಸಾಂಸ್ಕೃತಿಕ ಚರಿತ್ರೆಯಲ್ಲಿ ಕನಕರ ಕೊಡುಗೆ ಅಪಾರ. ರಾಮಧಾನ್ಯ ಚರಿತ್ರೆ ಮೂಲಕ ನೊಂದ ವರ್ಗಗಳ ಪರವಾಗಿ ಆತ್ಮಸ್ಥೈರ್ಯ ತುಂಬುವ ಕೆಲಸವನ್ನು ಕನಕದಾಸರು ಮಾಡಿದ್ದಾರೆ’ ಎಂದು ಸಲಹೆ ಮಾಡಿದರು.

ADVERTISEMENT

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ‌ ಪ್ರಾಂಶುಪಾಲೆ ಪ್ರೊ.ಬಿ.ಪಿ ಇಂದಿರಾ ಅವರು, ಕನಕದಾಸರ ಮುಂಡಿಗೆ ಮತ್ತು ಅವರ ಜೀವನ ಸಾಧನೆ ಬಗ್ಗೆ ಮಾತನಾಡಿದರು.

ಕನಕ ನಡೆ-ನುಡಿ ಉತ್ಸವದಲ್ಲಿ ಭಾಗವಹಿಸುವಂತೆ ಸೂಚಿಸಿದ್ದ ಹಿನ್ನೆಲೆಯಲ್ಲಿ ಶುಕ್ರವಾರ ನಡೆದ ಉತ್ಸವದಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಪುರಸ್ಕಾರ ಮತ್ತು ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ನೀಡಲಾಯಿತು. ಇದೇ ವೇಳೆ ಕನಕರ ಕಿರು ಚಿತ್ರ ಪ್ರದರ್ಶನ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಪಟ್ಟಣದ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸೇರಿದಂತೆ ತಿ. ನರಸೀಪುರ‌ದ ಮತ್ತೊಂದು ಪದವಿ ಕಾಲೇಜು, ತಲಕಾಡು, ಯಳಂದೂರು, ಕೊಳ್ಳೇಗಾಲ ಪದವಿ ‌ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಕಾರ್ಯಕ್ರಮದ ಸಂಚಾಲಕ ಡಾ.ಡಿ.ಪುರುಷೋತ್ತಮ ಹಾಗೂ ಅಧ್ಯಾಪಕ ವರ್ಗದವರು ಹಾಜರಿದ್ದರು.

ಕನಕರ ಚಿಂತನೆ ಆದರ್ಶ ಸಂದೇಶಗಳು ಸಾರ್ವಕಾಲಿಕವಾಗಿವೆ. ವಿದ್ಯಾರ್ಥಿಗಳು ಕನಕದಾಸರ ಚಿಂತನೆಗಳನ್ನು‌ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು
ಕಾ.ತ.ಚಿಕ್ಕಣ್ಣ ಕನಕದಾಸ ಮತ್ತು ತತ್ವಪದಕಾರರ ಅಧ್ಯಯನ ಕೇಂದ್ರದ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.