ADVERTISEMENT

ನಾಗರಹೊಳೆ 'ರಾಜೀವ್‌ ಗಾಂಧಿ ರಾಷ್ಟ್ರೀಯ ಉದ್ಯಾನವನ‘ದ ಹೆಸರು ಬದಲಿಸಲು ಅಭಿಯಾನ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2021, 12:34 IST
Last Updated 9 ಆಗಸ್ಟ್ 2021, 12:34 IST
   

ಮೈಸೂರು: ನಾಗರಹೊಳೆ ಪ್ರದೇಶಕ್ಕಿರುವ ‘ರಾಜೀವ್‌ ಗಾಂಧಿ ರಾಷ್ಟ್ರೀಯ ಉದ್ಯಾನ’ ಎಂಬ ಹೆಸರನ್ನು ಬದಲಿಸಿ, ‘ಫೀಲ್ಡ್‌ ಮಾರ್ಷಲ್‌ ಕೆ.ಎಂ.ಕಾರ್ಯಪ್ಪ’ ಹೆಸರಿಡಬೇಕೆಂದು ಆಗ್ರಹಿಸಿ ಆನ್‌ಲೈನ್ ಸಹಿ ಸಂಗ್ರಹ ಅಭಿಯಾನ ಶುರುವಾಗಿದೆ.

ಕೊಡಗಿನ ನವೀನ್‌ ಮಾದಪ್ಪ ಮತ್ತು ವಿನಯ್‌ ಕಾಯಪಂಡ ಎಂಬುವರು change.orgನಲ್ಲಿ ಆರಂಭಿಸಿರುವ ಅಭಿ
ಯಾನ ಬೆಂಬಲಿಸಿ, ಭಾನುವಾರ ರಾತ್ರಿಯ ವರೆಗೆ 6,400 ಮಂದಿ ಸಹಿ ಹಾಕಿದ್ದಾರೆ.

‘ರಾಜೀವ್‌ ಗಾಂಧಿ ಖೇಲ್‌ ರತ್ನ’ ಪ್ರಶಸ್ತಿಯ ಹೆಸರನ್ನು ‘ಮೇಜರ್‌ ಧ್ಯಾನ್‌ ಚಂದ್‌ ಖೇಲ್‌ ರತ್ನ’ ಪ್ರಶಸ್ತಿ ಎಂದು ಕೇಂದ್ರ ಸರ್ಕಾರ ಇತ್ತೀಚೆಗೆ ಬದಲಾಯಿಸಿದೆ. ಈ ಮಧ್ಯೆ ರಾಜ್ಯದಲ್ಲಿ ಇಂದಿರಾ ಕ್ಯಾಂಟೀನ್‌ನ ಹೆಸರನ್ನೂ ಬದಲಿಸುವ ಚರ್ಚೆಗಳು ನಡೆಯುತ್ತಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.