ADVERTISEMENT

ಪುಸ್ತಕ ಸಗಟು ಖರೀದಿಗೆ ಸಿಎಂಗೆ ಮನವಿ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2025, 2:29 IST
Last Updated 3 ಸೆಪ್ಟೆಂಬರ್ 2025, 2:29 IST
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕರ್ನಾಟಕ ಲೇಖಕರ ಮತ್ತು ಪ್ರಕಾಶಕರ ಒಕ್ಕೂಟದ ಅಧ್ಯಕ್ಷ ಡಾ.ಎಸ್.ಪಿ. ಯೋಗಣ್ಣ ಹಾಗೂ ಕಾರ್ಯದರ್ಶಿ ಸೃಷ್ಟಿ ನಾಗೇಶ್‌ ಮನವಿ ಸಲ್ಲಿಸಿದರು
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕರ್ನಾಟಕ ಲೇಖಕರ ಮತ್ತು ಪ್ರಕಾಶಕರ ಒಕ್ಕೂಟದ ಅಧ್ಯಕ್ಷ ಡಾ.ಎಸ್.ಪಿ. ಯೋಗಣ್ಣ ಹಾಗೂ ಕಾರ್ಯದರ್ಶಿ ಸೃಷ್ಟಿ ನಾಗೇಶ್‌ ಮನವಿ ಸಲ್ಲಿಸಿದರು   

ಮೈಸೂರು: ‘ಗ್ರಂಥಾಲಯ ಇಲಾಖೆಯಲ್ಲಿ ನಿಂತು ಹೋಗಿರುವ ಏಕ ಗವಾಕ್ಷಿಯ ಸಗಟು ಖರೀದಿಯನ್ನು ಪುನಃ ಆರಂಭಿಸಬೇಕು. ಕನ್ನಡ ಪುಸ್ತಕಗಳ ಪುಟವಾರು ಬೆಲೆ ಏರಿಕೆ ಬಗ್ಗೆ ಕ್ರಮ ಕೈಗೊಳ್ಳಬೇಕು’ ಎಂದು ಕರ್ನಾಟಕ ಲೇಖಕರ ಮತ್ತು ಪ್ರಕಾಶಕರ ಒಕ್ಕೂಟವು ಸೋಮವಾರ ನಗರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿತು.

ಪುಸ್ತಕಗಳ ಸಗಟು ಖರೀದಿಗೆ ತೊಡಕಾಗಿರುವ ಕಾನೂನುಗಳನ್ನು ಸರಿಪಡಿಸುವಂತೆ ಒಕ್ಕೂಟವು ಕೋರಿತು. ಇದಕ್ಕೆ ಸ್ಪಂದಿಸಿದ ಮುಖ್ಯಮಂತ್ರಿ, ಇಲಾಖೆ ಅಧಿಕಾರಿಗಳ ಸಭೆ ಕರೆದು ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಒಕ್ಕೂಟದ ಅಧ್ಯಕ್ಷ ಡಾ. ಎಸ್‌.ಪಿ. ಯೋಗಣ್ಣ, ಕಾರ್ಯದರ್ಶಿಗಳಾದ ಸೃಷ್ಟಿ ನಾಗೇಶ್, ಪ್ರೊ. ಭಗವಾನ್, ಪ್ರಕಾಶಕರಾದ ಬಿ.ಸಿ. ಸತೀಶ್, ಮಂಜು, ರಾಜೇಶ್ ಹೊನ್ನೇನಹಳ್ಳಿ, ಲೋಕಪ್ಪ ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.