ಮೈಸೂರು: ನಗರದಲ್ಲಿ ಬುಧವಾರ ವಾಹನ ಸಂಚಾರ ಹೆಚ್ಚಿತ್ತು. ಬಿಟ್ಟು ಬಿಟ್ಟು ಸುರಿಯುತ್ತಿದ್ದ ಮಳೆಯಿಂದ ತಪಾಸಣೆ ಕೆಲಸವೂ ಮಂದಗತಿಯಲ್ಲಿತ್ತು.
ಒಟ್ಟು 196 ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇವುಗಳಲ್ಲಿ 166 ದ್ವಿಚಕ್ರ ವಾಹನಗಳು, 28 ಕಾರುಗಳು ಹಾಗೂ 2 ಆಟೊಗಳು ಸೇರಿವೆ.
ಬೀಳುತ್ತಿದ್ದ ಮಳೆಯ ನಡುವೆಯೇ ನಿರಾಶ್ರಿತರು, ರಸ್ತೆಬದಿ ಮಲಗುವವರು, ಆಸ್ಪತ್ರೆಗಳಲ್ಲಿ ದಾಖಲಾದ ರೋಗಿಗಳ ಸಂಬಂಧಿಕರು ದಾನಿಗಳು ಹಂಚುತ್ತಿದ್ದ ಆಹಾರ ಪೊಟ್ಟಣಗಳನ್ನು ಪಡೆದುಕೊಂಡಿದ್ದು ನಗರದ ಹಲವೆಡೆ ಕಂಡು ಬಂತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.