ADVERTISEMENT

ನಂಜನಗೂಡು: ನರಭಕ್ಷಕ ಹುಲಿ ಸೆರೆಗೆ ಕಾರ್ಯಾಚರಣೆ ಆರಂಭ

3 ಸಾಕಾನೆ, 207 ಸಿಬ್ಬಂದಿ ಭಾಗಿ; ಗಿರಿಜನರಿಂದಲೂ ಸಹಕಾರ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2023, 15:38 IST
Last Updated 25 ನವೆಂಬರ್ 2023, 15:38 IST
<div class="paragraphs"><p>ಹೆಡಿಯಾಲ ವಲಯ ಅರಣ್ಯ ಪ್ರದೇಶದಲ್ಲಿ ಶನಿವಾರ ಅರಣ್ಯ ಇಲಾಖೆ ಸಿಬ್ಬಂದಿ ಹುಲಿ ಸೆರೆಗಾಗಿ ಬೋನು ಇಟ್ಟರು</p></div>

ಹೆಡಿಯಾಲ ವಲಯ ಅರಣ್ಯ ಪ್ರದೇಶದಲ್ಲಿ ಶನಿವಾರ ಅರಣ್ಯ ಇಲಾಖೆ ಸಿಬ್ಬಂದಿ ಹುಲಿ ಸೆರೆಗಾಗಿ ಬೋನು ಇಟ್ಟರು

   

ಮೈಸೂರು: ನಂಜನಗೂಡು ತಾಲ್ಲೂಕಿನ ಬಳ್ಳೂರುಹುಂಡಿ ಗ್ರಾಮದಲ್ಲಿ ಮಹಿಳೆಯನ್ನು ಕೊಂದ ಹುಲಿಯ ಸೆರೆಗೆ ಅರಣ್ಯ ಇಲಾಖೆಯು ಶನಿವಾರ ಕಾರ್ಯಾಚರಣೆ ಆರಂಭಿಸಿದೆ. ಹುಲಿ ಓಡಾಡುವ ಮಾರ್ಗದಲ್ಲಿ ಬೋನು ಇರಿಸಲಾಗಿದೆ.

ಸಾಕಾನೆಗಳಾದ ಪಾರ್ಥ, ರೋಹಿತ, ಹಿರಣ್ಯ ಜೊತೆಗೆ ಅರಣ್ಯ ಇಲಾಖೆಯ 12 ಅಧಿಕಾರಿಗಳು ಹಾಗೂ 195 ಸಿಬ್ಬಂದಿ ಈ ಕಾರ್ಯಾಚರಣೆಯಲ್ಲಿ ಭಾಗಿ ಆಗಿದ್ದಾರೆ. ಜೊತೆಗೆ ನಾಗಣಾಪುರ, ಡೋರನಕಟ್ಟೆ, ವೆಂಕಟಗಿರಿ ಹಾಗೂ ವಡೆಯನಪುರ ಕಾಲೊನಿಗಳ ತಲಾ 25 ಗಿರಿಜನರೂ ನರಹಂತಕ ಹುಲಿಯ ಸೆರೆಗೆ ಶ್ರಮಿಸುತ್ತಿದ್ದಾರೆ.

ADVERTISEMENT

ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕುಮಾರ್‌ ಪುಷ್ಕರ್ ಹಾಗೂ ಮೈಸೂರು ವಲಯ ಅರಣ್ಯ ಸಂರಕ್ಷಣಾಧಿಕಾರಿ ಮಾಲತಿ ಪ್ರಿಯಾ ನೇತೃತ್ವದಲ್ಲಿ ಅಧಿಕಾರಿಗಳ ತಂಡವು ಶನಿವಾರ ಸಭೆ ನಡೆಸಿ ಕಾರ್ಯಾಚರಣೆಯ ಕ್ರಮಗಳ ಬಗ್ಗೆ ಚರ್ಚಿಸಿತು. ಬಂಡೀಪುರ ಅರಣ್ಯ ಸಂರಕ್ಷಣಾಧಿಕಾರಿ ಪಿ. ರಮೇಶ್‌ಕುಮಾರ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಾದ ಕೆ. ಪರಮೇಶ್‌, ಕೆ.ಆರ್. ನಾರಾಯಣ, ಡಿ. ಶ್ರೀನಿವಾಸ, ಅಮೃತ ಮಾಯಪ್ಪನವರ ಹಾಗೂ ಪಶು ವೈದ್ಯಾಧಿಕಾರಿ ವಾಸೀಂ ಮಿರ್ಜಾ ಸಭೆಯಲ್ಲಿ ಪಾಲ್ಗೊಂಡಿದ್ದರು.

ವಿಶೇಷ ಹುಲಿ ಸಂರಕ್ಷಣಾ ದಳ, ಚಿರತೆ ಕಾರ್ಯಪಡೆ ಹಾಗೂ ಆನೆ ಕಾರ್ಯಪಡೆಗಳ ಸಿಬ್ಬಂದಿ ಈ ಕಾರ್ಯಾಚರಣೆಯಲ್ಲಿ ಭಾಗಿ ಆಗಿದ್ದಾರೆ. ಕಾರ್ಯಾಚರಣೆಗೆ 50 ಸಿ–1 ಕ್ಯಾಮೆರಾ ಹಾಗೂ 5 ಜಿಎಸ್‌ಎಂ ಕ್ಯಾಮೆರಾಗಳು, ಅಗತ್ಯ ಔಷಧಿ, 10 ವಾಹನಗಳನ್ನು ಬಳಸಲಾಗುತ್ತಿದೆ. ತುಮಕೂರಿನಿಂದ ಹುಲಿ ಹಿಡಿಯುವ ಬೋನು ತರಿಸಿಕೊಳ್ಳಲಾಗಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.