
ಹಂಪಾಪುರ: ಗ್ರಾಮದ ಬೇಕರಿ ಸಮೀಪ ನಡೆದು ಸಾಗುತ್ತಿದ್ದ ವೇಳೆ 12 ಗ್ರಾಂ ಚಿನ್ನದ ಸರ ವ್ಯಕ್ತಿಯೊಬ್ಬರಿಗೆ ದೊರಕಿದ್ದು ಅದನ್ನು ವಾರಸುದಾರರಿಗೆ ತಲುಪಿಸುವಂತೆ ಕೋರಿ ಎಚ್.ಡಿ. ಕೋಟೆ ಪೊಲೀಸ್ ಠಾಣೆಗೆ ನೀಡಿದ್ದಾರೆ.
ಹಂಪಾಪುರ ಸಮೀಪದ ಜಿನ್ನಹಳ್ಳಿ ಗ್ರಾಮದ ಜೆ.ಪೊ. ಮರಳೂರನಾಯಕ ಎಂಬುವರು ತಮಗೆ ಬುಧವಾರ ದಾರಿಯಲ್ಲಿ ದೊರೆತ ಚಿನ್ನದ ಸರವನ್ನು ಠಾಣೆಗೆ ಒಪ್ಪಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ.
ಚಿನ್ನದ ಸರ ಪಡೆದು ಇನ್‌ಸ್ಪೆಕ್ಟರ್ ಗಂಗಾಧರ್ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿ ಮರಳೂರ ನಾಯಕ ಅವರು ತಮಗೆ ದಾರಿಯಲ್ಲಿ ದೊರೆತ ಚಿನ್ನದ ಸರವನ್ನು ಠಾಣೆಗೆ ತಲುಪಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ. ಅವರಿಗೆ ಠಾಣೆ ವತಿಯಿಂದ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಚಿನ್ನದ ಸರ ಕಳೆದುಕೊಂಡ ಸಂಬಂಧಪಟ್ಟವರು ಎಚ್.ಡಿ. ಕೋಟೆ ಪೊಲೀಸ್ ಠಾಣೆಗೆ (9480805063) ಸೂಕ್ತ ದಾಖಲೆಯೊಂದಿಗೆ ಸಂಪರ್ಕಿಸುವಂತೆ ಕೋರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.