ADVERTISEMENT

ರೈತ ದಸರಾ | 38 ಕೆ.ಜಿ. ಹಾಲು; ಆನೇಕಲ್‌ ಹಸು ಪ್ರಥಮ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2025, 0:14 IST
Last Updated 28 ಸೆಪ್ಟೆಂಬರ್ 2025, 0:14 IST
<div class="paragraphs"><p>ನಾಡಹಬ್ಬ ದಸರಾ ಮಹೋತ್ಸವ ಅಂಗವಾಗಿ ಮೈಸೂರು ಅರಮನೆ ದೀಪಾಲಂಕಾರದಿಂದ ಕಂಗೊಳಿಸಿದ ಪರಿ </p></div>

ನಾಡಹಬ್ಬ ದಸರಾ ಮಹೋತ್ಸವ ಅಂಗವಾಗಿ ಮೈಸೂರು ಅರಮನೆ ದೀಪಾಲಂಕಾರದಿಂದ ಕಂಗೊಳಿಸಿದ ಪರಿ

   

ಚಿತ್ರಗಳು: ಅನೂಪ್ ರಾಘ.ಟಿ.

ಮೈಸೂರು: ‘ರೈತ ದಸರಾ’ ಪ್ರಯುಕ್ತ ಇಲ್ಲಿ ಶನಿವಾರ ಏರ್ಪಡಿಸಿದ್ದ ರಾಜ್ಯಮಟ್ಟದ ಹಾಲು ಕರೆಯುವ ಸ್ಪರ್ಧೆಯಲ್ಲಿ ಬೆಂಗಳೂರಿನ ಆನೇಕಲ್‌ನ ಅಜಯ್‌ ಅವರ ಮಿಶ್ರ ತಳಿಯ ಹಸು ಎರಡೂ ಹೊತ್ತು ಸೇರಿ 38 ಕೆ.ಜಿ 150 ಗ್ರಾಂ ಹಾಲು ನೀಡಿ ಪ್ರಥಮ ಸ್ಥಾನ ಪಡೆಯಿತು.

ADVERTISEMENT

ಪಿರಿಯಾಪಟ್ಟಣ ತಾಲ್ಲೂಕಿನ ಚಿಟ್ಟೇನಹಳ್ಳಿಯ ಸಿ.ಎಸ್‌.ಸಂಜೀವ್‌ ಅವರ ಹಸು 37 ಕೆ.ಜಿ 150 ಗ್ರಾಂ, ಬೆಂಗಳೂರು ನಾಗರಭಾವಿಯ ಹರ್ಷಿತ್‌ ಗೌಡ ಅವರ ಹಸು 37 ಕೆ.ಜಿ. 100 ಗ್ರಾಂ, ಶ್ರೀರಂಗಪಟ್ಟಣ ತಾಲ್ಲೂಕಿನ ಗಂಜಾಂನ ನಿಶಾಂತ್ ಶಿವರಾಂ ಅವರ ಹಸು 36 ಕೆ.ಜಿ 850 ಗ್ರಾಂ ಹಾಲು ನೀಡಿ, ಕ್ರಮವಾಗಿ ಎರಡು, ಮೂರು ಹಾಗೂ ನಾಲ್ಕನೇ ಸ್ಥಾನಗಳನ್ನು ಪಡೆದವು.

ಸಚಿವ ಕೆ.ವೆಂಕಟೇಶ್‌ ಅವರು ಹಸುಗಳ ಮಾಲೀಕರಿಗೆ ಕ್ರಮವಾಗಿ ₹1 ಲಕ್ಷ, ₹80 ಸಾವಿರ, ₹60 ಸಾವಿರ, ₹40 ಸಾವಿರ ನಗದು, ನೆನಪಿನ ಕಾಣಿಕೆ ನೀಡಿದರು.

15 ಸ್ಪರ್ಧಿಗಳು ಭಾಗವಹಿಸಿದ್ದು, ಉಳಿದ ಸ್ಪರ್ಧಿಗಳ ಹಸುಗಳೂ 20 ಕೆ.ಜಿಗೂ ಅಧಿಕ ಹಾಲು ನೀಡಿದ್ದು ಪ್ರೋತ್ಸಾಹಕ ಬಹುಮಾನವಾಗಿ ತಲಾ ₹10 ಸಾವಿರ ನೀಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.