ಮೈಸೂರು: ‘ಪ್ರಧಾನಿ ಮೋದಿ ಏನು ಮಾಡಿದರೂ ಅದರ ಹಿಂದೆ ದೂರದ ಆಲೋಚನೆ ಇರುತ್ತದೆ. ಅದಕ್ಕೆ ಪ್ರಾಮುಖ್ಯವಿರುತ್ತದೆ. ಅವರಿಗೆ ಸಾಕಷ್ಟು ಲೋಕಾನುಭವವಿದೆ’ ಎಂದು ಹಿರಿಯ ಸಾಹಿತಿ ಎಸ್.ಎಲ್.ಭೈರಪ್ಪ ಭಾನುವಾರ ಇಲ್ಲಿ ಬಣ್ಣಿಸಿದರು. ‘ಕೇವಲ ಭಾರತದಲ್ಲಿ ಅಲ್ಲ; ವಿಶ್ವಮಟ್ಟದಲ್ಲಿ ಅವರ ಆಲೋಚನೆ
ಗಳಿಗೆ ಪ್ರಾಮುಖ್ಯವಿದೆ’ ಎಂದರು.
‘ರಾಮಮಂದಿರ ನಿರ್ಮಾಣವಾಗಲಿ ಎಂದು ಬಯಸುವವರಲ್ಲಿ ನಾನೂ ಒಬ್ಬ. ಆದರೆ, ಈ ವಿಚಾರ ನ್ಯಾಯಾಲಯದಲ್ಲಿದೆ. ತಾಳ್ಮೆಯಿಂದ ಕಾಯಬೇಕು’ ಎಂದು ನುಡಿದರು. ಸುತ್ತೂರು ಶಾಖಾ ಮಠಕ್ಕೆ ಭೇಟಿ ನೀಡಿ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಆಶೀರ್ವಾದ ಪಡೆದು ಮಾತನಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.