ADVERTISEMENT

ಚಿತ್ರಕಲಾ ಸ್ಪರ್ಧೆ: ವಿಜೇತರಿಗೆ ಬಹುಮಾನ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2025, 3:16 IST
Last Updated 10 ಡಿಸೆಂಬರ್ 2025, 3:16 IST
ಇಟ್ಟಿಗೆಗೂಡಿನಲ್ಲಿ ಭಾನುವಾರ ‘ಟೀಂ ಮೈಸೂರು’ ಆಯೋಜಿಸಿದ್ದ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಬಹುಮಾನ ವಿತರಿಸಿದರು 
ಇಟ್ಟಿಗೆಗೂಡಿನಲ್ಲಿ ಭಾನುವಾರ ‘ಟೀಂ ಮೈಸೂರು’ ಆಯೋಜಿಸಿದ್ದ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಬಹುಮಾನ ವಿತರಿಸಿದರು    

ಮೈಸೂರು: ಇಟ್ಟಿಗೆಗೂಡಿನ ಮಕ್ಕಳ ಉದ್ಯಾನದಲ್ಲಿ ಭಾನುವಾರ ಮಾಜಿ ರಾಷ್ಟ್ರಪತಿ ಡಾ.ಎಪಿಜೆ ಅಬ್ದುಲ್‌ ಕಲಾಂ ಜನ್ಮದಿನದ ಪ್ರಯುಕ್ತ ‘ಟೀಂ ಮೈಸೂರು’ ಆಯೋಜಿಸಿದ್ದ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದ ಚಿಣ್ಣರಿಗೆ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಮತ್ತು ಶಾಸಕ ಟಿ.ಎಸ್.ಶ್ರೀವತ್ಸ ಬಹುಮಾನ ವಿತರಿಸಿದರು. 

ಸ್ಪರ್ಧೆಯಲ್ಲಿ 160 ಮಂದಿ ಪಾಲ್ಗೊಂಡರು. ಮಾಜಿ ಮೇಯರ್ ಶಿವಕುಮಾರ್ ಸ್ಪರ್ಧೆಗೆ ಚಾಲನೆ ನೀಡಿದರೆ, ಮುಖಂಡರಾದ ವನರಾಜಣ್ಣ, ಸುಂದರ್ ಮೂರ್ತಿ, ಪ್ರಭಾಕರ್ ಶಿಂಧೆ, ನವೀನ್, ಹರೀಶ್, ಕೃಷ್ಣ, ಟೀಂ ಮೈಸೂರು ತಂಡದ ಗೋಕುಲ್ ಗೋವರ್ಧನ್, ಕಿರಣ್ ಜೈರಾಮೇಗೌಡ, ಅನಿಲ್ ಜೈನ್, ಹಿರಿಯಣ್ಣ, ರಾಮಪ್ರಸಾದ್, ಪ್ರಸನ್ನ ರಾಘವೇಂದ್ರ ರಾಜಗುರು, ಮನೋಹರ, ಹರೀಶ್ ಶೆಟ್ಟಿ, ಮಂಜು ಹುಣಸೂರು, ಹೇಮಂತ್ ಸಿ.ಗೌಡ ‍ಪಾಲ್ಗೊಂಡಿದ್ದರು.  

ವಿಜೇತರು: 6ನೇ ತರಗತಿಯೊಳಗಿನವರ ವಿಭಾಗ: ಸ್ನೇಹಾರ್ಚನಾ (ನಿರ್ಮಲಾ ಕಾನ್ವೆಂಟ್‌)–1, ತೀರ್ಥ ಡಿ.ಸೋನಿ (ಭಾರತೀಯ ವಿದ್ಯಾಭವನ)–2, ಜಿ.ನಮಿತ್ (ಕೇಂದ್ರೀಯ ವಿದ್ಯಾಲಯ)–3. 6–10ನೇ ತರಗತಿ ಒಳಗಿನವರ ವಿಭಾಗ: ವಿ.ಜಗದೀಶ್ (ಆದರ್ಶ ವಿದ್ಯಾಲಯ, ಸೋಸಲೆ)–1, ಪಾವನಿ (ಕ್ಯಾಪಿಟಲ್ ಪಬ್ಲಿಕ್ ಶಾಲೆ, 8ನೇ ತರಗತಿ, )–2, ಕ್ಷಿತಿ (ಎಸ್‌ಜೆಸಿ ಶಾಲೆ)–3. ಪಿಯುಸಿ– ಪದವಿ ವಿಭಾಗ: ಬಿ. ತೇಜಸ್ವಿನಿ (ಬಿಜಿಎಸ್ ಕಾಲೇಜು)–1, ಕೆ.ಸುನಿಲ್ ಕುಮಾರ್ (ಕಾವಾ ಕಾಲೇಜು)–2, ಎಂ.ಅಮೃತ್ (ಜಿಟಿಟಿಸಿ ಕಾಲೇಜು)–3.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.