ADVERTISEMENT

ಸಿಎಂ ಅನುಭವದಷ್ಟು ಸಾ.ರಾಗೆ ವಯಸ್ಸು: ಶಾಸಕ ಎಲ್.ನಾಗೇಂದ್ರ ವ್ಯಂಗ್ಯ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2020, 7:28 IST
Last Updated 1 ಅಕ್ಟೋಬರ್ 2020, 7:28 IST
ಎಲ್‌.ನಾಗೇಂದ್ರ
ಎಲ್‌.ನಾಗೇಂದ್ರ   

ಮೈಸೂರು: ‘ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗಿರುವ ರಾಜ ಕೀಯ ಅನುಭವದಷ್ಟು ವಯಸ್ಸು ಶಾಸಕ ಸಾ.ರಾ.ಮಹೇಶ್‌ ಅವರದ್ದು. ಅಧಿಕಾರದಲ್ಲಿದ್ದಾಗ ಅವರು ಏನೇನು ಮಾಡಿದರು ಎಂಬುದು ಗೊತ್ತಿದೆ’ ಎಂದು ಬಿಜೆಪಿ ಶಾಸಕ ಎಲ್.ನಾಗೇಂದ್ರ ಬುಧವಾರ ಇಲ್ಲಿ ಕುಟುಕಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸಾ.ರಾ.ಮಹೇಶ್‌ ಅವರು ಮಾತನಾಡಿದ್ದಕ್ಕೆಲ್ಲಾ ನಾನು ಉತ್ತರ ಕೊಡಲುಹೋಗು ವುದಿಲ್ಲ. ಆದರೆ, ಜಿಲ್ಲಾಧಿಕಾರಿ, ಪಾಲಿಕೆ ಆಯುಕ್ತ, ಪೊಲೀ ಸ್‌ ಕಮೀ ಷನರ್‌ ಅನ್ನು ವರ್ಗಾ ವಣೆ ಮಾಡುವುದು ಸರ್ಕಾರಕ್ಕೆ ಬಿಟ್ಟ ವಿಚಾರ. ಯಾರು ಇದ್ದರೆ ಆಡಳಿತಕ್ಕೆ ಒಳ್ಳೆಯದು ಎಂಬುದನ್ನು ಆಧರಿಸಿ ನಿರ್ಧಾರ ಕೈಗೊಳ್ಳಲಾಗುತ್ತದೆ. ಇದರ ಹಿಂದೆ ಯಾರ ಒತ್ತಡವೂ ಇಲ್ಲ’ ಎಂದರು.

ದಸರೆ ವೇಳೆ ಬದಲಾವಣೆ ಮಾಡಿರುವ ಬಗ್ಗೆ ಪ್ರತಿಕ್ರಿಯಿಸಿ, ‘ವರ್ಗಾವಣೆ ವಿಚಾರ ನನ್ನ ವ್ಯಾಪ್ತಿಗೆ ಬರುವುದಿಲ್ಲ. ಮುಖ್ಯಮಂತ್ರಿಯ ವಿವೇ ಚನೆಗೆ ಬಿಟ್ಟಿದ್ದು’ ಎಂದು ಹೇಳಿದರು.

ADVERTISEMENT

‘ಆಂಧ್ರದ ಒಬ್ಬ ಹೆಣ್ಣು ಮಗಳಿಗಾಗಿ, ಕನ್ನಡಿಗ ಹಾಗೂ ದಲಿತ ಜಿಲ್ಲಾಧಿಕಾರಿಯನ್ನು ವರ್ಗಾವಣೆ ಮಾಡಿ ಅವಮಾನ ಮಾಡಲಾಗಿದೆ. ಕರ್ನಾಟಕದಲ್ಲಿ ಯಡಿಯೂರಪ್ಪ ಆಡಳಿತ ನಡೆಸುತ್ತಿದ್ದಾರಾ ಅಥವಾ ಆಂಧ್ರಪ್ರದೇಶದ ಮುಖ್ಯಮಂತ್ರಿ ಅಧಿಕಾರ ನಡೆಸುತ್ತಿದ್ದಾರಾ?’ ಎಂದು ಜೆಡಿಎಸ್‌ ಶಾಸಕ ಸಾ.ರಾ.ಮಹೇಶ್‌ ಮಂಗಳವಾರ ಹರಿಹಾಯ್ದಿದ್ದರು. ಈ ಹಿನ್ನೆಲೆಯಲ್ಲಿ ನಾಗೇಂದ್ರ ಅವರು ಈ ರೀತಿ ತಿರುಗೇಟು ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.