ADVERTISEMENT

ಮೈಸೂರು ದಸರಾ: ಜಂಬೂಸವಾರಿಗೆ ಅರಮನೆಯಲ್ಲಿ ನಡೆದಿದೆ ಭರದ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2021, 7:34 IST
Last Updated 15 ಅಕ್ಟೋಬರ್ 2021, 7:34 IST
ಚಾಮುಂಡೇಶ್ವರಿ ದೇವಿಯ ಉತ್ಸವ ಮೂರ್ತಿಗೆ ಸಚಿವ ಎಸ್.ಟಿ.ಸೋಮಶೇಖರ್ ಪುಷ್ಪಾರ್ಚನೆ ಮಾಡಿದರು.
ಚಾಮುಂಡೇಶ್ವರಿ ದೇವಿಯ ಉತ್ಸವ ಮೂರ್ತಿಗೆ ಸಚಿವ ಎಸ್.ಟಿ.ಸೋಮಶೇಖರ್ ಪುಷ್ಪಾರ್ಚನೆ ಮಾಡಿದರು.   

ಮೈಸೂರು: ವಿಶ್ವವಿಖ್ಯಾತ ಜಂಬೂಸವಾರಿಗಾಗಿ ಇಲ್ಲಿನ ಅರಮನೆಯಲ್ಲಿ ಸಿದ್ದತಾ ಕಾರ್ಯಗಳು ಭರದಿಂದ ನಡೆದಿವೆ.

ವಿವಿಧ ಕಲಾತಂಡಗಳು ಅಲಂಕಾರ ಮೊದಲಾದ ಪ್ರಕ್ರಿಯೆಯಲ್ಲಿ ತೊಡಗಿವೆ. ಕೆಲವು ಸ್ತಬ್ಧಚಿತ್ರಗಳು ಈಗಾಗಲೇ ಅಣಿಗೊಂಡಿವೆ. ಅಂಬಾರಿಯ ಉತ್ಸವಮೂರ್ತಿಯ ಆಗಮನಕ್ಕೆ ಎದುರುನೋಡಲಾಗುತ್ತಿದೆ.

-ಚಾಮುಂಡೇಶ್ವರಿ ದೇವಿ

ಅಂಬಾರಿ ಉತ್ಸವ ಮೂರ್ತಿಗೆ ಪುಷ್ಪಾರ್ಚನೆ
ಮೈಸೂರು: ದಸರಾ ಮಹೋತ್ಸವದ ಜಂಬೂಸವಾರಿಯಲ್ಲಿ ಚಿನ್ನದ ಅಂಬಾರಿ ಮೇಲೆ ವಿರಾಜಮಾನವಾಗುವ ಚಾಮುಂಡೇಶ್ವರಿ ದೇವಿಯ ಉತ್ಸವ ಮೂರ್ತಿಗೆ ಇಲ್ಲಿನ ಚಾಮುಂಡಿಬೆಟ್ಟದಲ್ಲಿ ಸಚಿವ ಎಸ್.ಟಿ.ಸೋಮಶೇಖರ್ ಪುಷ್ಪಾರ್ಚನೆ ಮಾಡಿದರು.

ADVERTISEMENT

ಅಲಂಕೃತ ವಾಹನದಲ್ಲಿ ನಾದಸ್ವರ ವಿವಿಧ ಕಲಾತಂಡಗಳ ಜೊತೆಗೆ ಬೆಟ್ಟದಲ್ಲಿ ಮೆರವಣಿಗೆ ಮಾಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.