ADVERTISEMENT

ಹೀಗೂ ಮದ್ಯ ಅಕ್ರಮ ಸಾಗಾಟ ಮಾಡ್ತಾರೆ! ವಿಡಿಯೋ ನೋಡಿ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2020, 9:57 IST
Last Updated 12 ಏಪ್ರಿಲ್ 2020, 9:57 IST

ಮೈಸೂರು: ಮಂಗಳವಾದ್ಯ ನುಡಿಸುವವರಂತೆ ವೇಷಧರಿಸಿ‌ ಚರ್ಮವಾದ್ಯದೊಳಗೆ ಮದ್ಯದ 45 ಪೌಚ್‌ಗಳನ್ನು ಹಾಕಿಕೊಂಡು ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ ಚೆಲುವರಾಜು ಹಾಗೂ ನಂಜಪ್ಪ ಎಂಬುವವರನ್ನು ಎಚ್.ಡಿ.ಕೋಟೆ ತಾಲ್ಲೂಕಿನ ಪೊಲೀಸರು ಬಂಧಿಸಿದ್ದಾರೆ. ತಾಲ್ಲೂಕಿನ ಉದ್ಬೂರು‌ ಚೆಕ್‌ಪೋಸ್ಟ್‌ನಲ್ಲಿ ಅನುಮಾನಗೊಂಡು ತಪಾಸಣೆ ನಡೆಸಿದಾಗ ಮದ್ಯದ ಬಾಟಲಿಗಳು ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.