ADVERTISEMENT

ಮೈಸೂರು: ಮಹಾನಗರ ಪಾಲಿಕೆ ಕೌನ್ಸಿಲ್ ಸಭೆಯ ಆರಂಭದಲ್ಲೇ ಗದ್ದಲ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2021, 7:24 IST
Last Updated 10 ಆಗಸ್ಟ್ 2021, 7:24 IST
ಮೈಸೂರು ಮಹಾನಗರ ಪಾಲಿಕೆಯ ಕೌನ್ಸಿಲ್ ಸಭೆ
ಮೈಸೂರು ಮಹಾನಗರ ಪಾಲಿಕೆಯ ಕೌನ್ಸಿಲ್ ಸಭೆ   

ಮೈಸೂರು: ಮಹಾನಗರ ಪಾಲಿಕೆಯ ಕೌನ್ಸಿಲ್ ಸಭೆ ಮಂಗಳವಾರ ಆರಂಭವಾದ ಕೂಡಲೆ ಗದ್ದಲದ ವಾತಾವರಣ ಸೃಷ್ಟಿಯಾಗಿದೆ‌.

ಪಾಲಿಕೆ ಸದಸ್ಯರಾದ ಪ್ರಮೀಳಾ ಭರತ್ ಅವರು ಪೌರಕಾರ್ಮಿಕರ ಕೊರತೆ ಕುರಿತು ವಿಷಯ ಪ್ರಸ್ತಾಪಿಸಿದಾಗ ಗದ್ದಲ ಮೂಡಿತು. ಮೊದಲು ವಾರ್ಡಿನ ಸಮಸ್ಯೆಗಳನ್ನು ಕುರಿತು ಚರ್ಚೆ ನಡೆಸಬೇಕು ಎಂದು ಸದಸ್ಯರು ಪಟ್ಟು ಹಿಡಿದಿದ್ದಾರೆ.

ಕಾರ್ಯಸೂಚಿ ಬದಲಿಗೆ ಸಾಮಾನ್ಯ ವಿಷಯ ಚರ್ಚೆಗೆ ಅವಕಾಶ

ADVERTISEMENT

ಸದಸ್ಯರ ಒತ್ತಾಯಕ್ಕೆ ಮಣಿದ ಪ್ರಭಾರ ಮೇಯರ್ ಅನ್ವರ್ ಬೇಗ್ ಕಾರ್ಯಸೂಚಿಯ ಬದಲಿಗೆ ಸಾಮಾನ್ಯ ವಿಷಯ ಚರ್ಚೆಗೆ ಅವಕಾಶ ಮಾಡಿಕೊಟ್ಟರು.ಮೊದಲಿಗೆ ಪೌರಕಾರ್ಮಿಕರ ಕೊರತೆ ವಿಷಯವನ್ನುಸದಸ್ಯರಾದ ಸುನಂದಾ ಫಾಲನೇತ್ರ, ಪ್ರಮೀಳಾ ಭರತ್, ಲಕ್ಷ್ಮಿ, ಕೆ.ವಿ.ಶ್ರೀಧರ್, ಪ್ರೇಮಾ ಶಂಕರೇಗೌಡ ಮಾತನಾಡಿದರು.

ಬಿಜೆಪಿ- ಕಾಂಗ್ರೆಸ್ ಸದಸ್ಯರ ಮಧ್ಯೆ ವಾಗ್ವಾದ

ಪ್ರಧಾನಮಂತ್ರಿ ನರೇಂದ್ರಮೋದಿ ಪೌರಕಾರ್ಮಿಕರ ಪಾದ ತೊಳೆದು ಪೂಜಿಸಿದರು ಎಂಬ ಬಿಜೆಪಿ ಸದಸ್ಯರ ಮಾತಿಗೆ ಕೆಲವು ಸದಸ್ಯರು ಮತಗೋಸ್ಕರ ಏನು ಬೇಕಾದರೂ ಮಾಡುತ್ತಾರೆ ಎಂದು ಪ್ರತಿಕ್ರಿಯಿಸಿದರು.ಈ ವಿಷಯ ಕುರಿತು ಬಿಜೆಪಿ ಸದಸ್ಯರು ಮೆಯರ್ ಪೀಠದ ಮುಂದೆ ಜಮಾಯಿಸಿ ಘೋಷಣೆಗಳನ್ನು ಕೂಗಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.