ADVERTISEMENT

ಮೇಲ್ಮನೆ ಸದಸ್ಯ ಡಾ.ತಿಮ್ಮಯ್ಯಗೆ ಪತ್ನಿ ವಿಯೋಗ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2022, 11:32 IST
Last Updated 4 ಏಪ್ರಿಲ್ 2022, 11:32 IST
ಮೀರಾಬಾಯಿ
ಮೀರಾಬಾಯಿ   

ಮೈಸೂರು: ವಿಧಾನ ಪರಿಷತ್‌ ಸದಸ್ಯ ಡಾ.ಡಿ.ತಿಮ್ಮಯ್ಯ ಅವರ ಪತ್ನಿ ಮೀರಾಬಾಯಿ (75) ಅನಾರೋಗ್ಯದಿಂದ ಸೋಮವಾರ ಮಧ್ಯಾಹ್ನ ಇಲ್ಲಿನ ಬಿಜಿಎಸ್‌–ಅಪೋಲೊ ಆಸ್ಪತ್ರೆಯಲ್ಲಿ ನಿಧನರಾದರು.

ರಾಮಕೃಷ್ಣನಗರದ ಆರ್ಕಿಡ್‌ ಶಾಲೆ ಎದುರಿನ ನಿವಾಸಿಯಾದ ಅವರಿಗೆ ಪತಿ ಡಾ.ತಿಮ್ಮಯ್ಯ, ಪುತ್ರ ಅರುಣ್‌ ಕುಮಾರ್‌, ಪುತ್ರಿಯರಾದ ಸವಿತಾ ಹಾಗೂ ಡಾ.ಸಹನಾ ಇದ್ದಾರೆ.

ಪುತ್ರಿ ಸವಿತಾ ಬಹ್ರೈನ್‌ನಲ್ಲಿ ನೆಲೆಸಿದ್ದು, ಮಧ್ಯರಾತ್ರಿ ವೇಳೆಗೆ ಮೈಸೂರಿಗೆ ಬರುವ ನಿರೀಕ್ಷೆ ಇದೆ. ಮಂಗಳವಾರ ಬೆಳಿಗ್ಗೆ ಮೃತರ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.