ADVERTISEMENT

ಮೈಸೂರು ಬಂದ್‌: ಬಸ್‌, ಹೋಟೆಲ್‌ಗಳ ಮೇಲೆ ಕಲ್ಲೆಸೆತ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2022, 8:35 IST
Last Updated 7 ಫೆಬ್ರುವರಿ 2022, 8:35 IST
ಬಸ್‌, ಹೋಟೆಲ್‌ಗಳ ಮೇಲೆ ಕಲ್ಲೆಸೆತ
ಬಸ್‌, ಹೋಟೆಲ್‌ಗಳ ಮೇಲೆ ಕಲ್ಲೆಸೆತ   

ಮೈಸೂರು: ರಾಯಚೂರು ಜಿಲ್ಲಾ ನ್ಯಾಯಾಲಯದಲ್ಲಿ ಗಣರಾಜ್ಯೋತ್ಸವದ ದಿನ ಡಾ.ಬಿ.ಆರ್.ಅಂಬೇಡ್ಕರ್ ಭಾವಚಿತ್ರ ತೆಗೆದ ಪ್ರಕರಣ ಖಂಡಿಸಿ, ಸಂವಿಧಾನ ರಕ್ಷಣಾ ಸಮಿತಿ ಸೋಮವಾರ ಕರೆ ನೀಡಿದ್ದ ‘ಮೈಸೂರು ಬಂದ್‌’ ವೇಳೆ ಪ್ರತಿಭಟನಕಾರರು ಬಸ್‌ಗಳು ಹಾಗೂ ಹೋಟೆಲ್‌ಗಳ ಮೇಲೆ ಕಲ್ಲು ತೂರಿದ್ದಾರೆ.

ಕೆಎಸ್‌ಆರ್‌ಟಿಸಿ ನಗರ ಬಸ್‌ನಿಲ್ದಾಣದ ಒಳಗೆ ನಿಂತಿದ್ದ ಬಸ್‌ವೊಂದರ ಮೇಲೆ ಕಲ್ಲು ತೂರಿದ್ದರಿಂದ ಮುಂಭಾಗದ ಗಾಜು ಪುಡಿಯಾಗಿದೆ. ಪುರಭವನದ ಮುಂಭಾಗವೂ ಬಸ್‌ವೊಂದರ ಮೇಲೆ ಕಲ್ಲು ತೂರಲಾಗಿದೆ.

ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ ಪ್ರತಿಕ್ರಿಯಿಸಿ, ಸಯ್ಯಾಜಿರಾವ್ ರಸ್ತೆ, ಅಗ್ರಹಾರ, ಶಿವರಾಮಪೇಟೆ ಸೇರಿದಂತೆ ಹಲವೆಡೆ ಬಾಗಿಲು ತೆರೆದಿದ್ದ ಹೋಟೆಲ್‌ಗಳನ್ನು ಬಲವಂತವಾಗಿ ಮುಚ್ಚಿಸಲಾಗಿದೆ. 4 ಹೋಟೆಲ್‌ಗಳ ಮೇಲೆ ಕಲ್ಲು ತೂರಲಾಗಿದೆ ಎಂದು ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.