
ಪ್ರಜಾವಾಣಿ ವಾರ್ತೆ
ಸಾವು (ಪ್ರಾತಿನಿಧಿಕ ಚಿತ್ರ)
ಪಿರಿಯಾಪಟ್ಟಣ (ಮೈಸೂರು ಜಿಲ್ಲೆ): ತಾಲ್ಲೂಕಿನ ಹಳೆಕೆರೆ ಗಿರಿಜನರ ಹಾಡಿಯಲ್ಲಿ ಊಟ ಮಾಡುವಾಗ ಕೋಳಿ ಮಾಂಸವನ್ನು ಹೆಚ್ಚು ತಿಂದ ಎನ್ನುವ ವಿಚಾರಕ್ಕೆ ಇಬ್ಬರು ಬಾಲಕರ ನಡುವೆ ಜಗಳ ನಡೆದಿದೆ. ಈ ವೇಳೆ ಒಬ್ಬ ಮಚ್ಚಿನಿಂದ ಇನ್ನೊಬ್ಬನ ತಲೆಗೆ ಹೊಡೆದು ಹತ್ಯೆ ಮಾಡಿದ್ದಾನೆ.
ಹಳೆಕೆರೆ ಹಾಡಿಯ ನಿವಾಸಿ ದಿಲೀಪ ಮೃತ ಬಾಲಕ ಎಂದು ಗುರುತಿಸಲಾಗಿದೆ. ಈತ ಸುರೇಶ್ ಮತ್ತು ಸಂಗೀತಾ ಎಂಬುವವರ ಮಗ. ಈ ದಂಪತಿ ಕೊಡಗು ಹಾಗೂ ಸಕಲೇಶಪುರದ ತೋಟಗಳಲ್ಲಿ ಕೆಲಸ ಮಾಡುವವರಾಗಿದ್ದಾರೆ. ಪಿರಿಯಾಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.