
ಪ್ರಜಾವಾಣಿ ವಾರ್ತೆ
ಮೈಸೂರು: ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಮೂಲಕ ಛಾಯಾದೇವಿ ವಿಶೇಷ ದತ್ತು ಕೇಂದ್ರದ ಮಗುವನ್ನು ಸ್ಪೇನ್ ಪೋಷಕರು ನಗರದಲ್ಲಿ ಬುಧವಾರ ಜಿಲ್ಲಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ ಸಮ್ಮುಖದಲ್ಲಿ ದತ್ತು ಸ್ವೀಕರಿಸಿದರು.
ಸರ್ಕಾರಿ ವಿಶೇಷ ದತ್ತು ಕೇಂದ್ರದ 3 ಹಾಗೂ ಛಾಯಾದೇವಿ ದತ್ತು ಕೇಂದ್ರದಿಂದ ಮೂವರು ಮಕ್ಕಳನ್ನು ಕಾನೂನು ಪ್ರಕ್ರಿಯೆ ಮೂಲಕ ಪೋಷಕರಿಗೆ ದತ್ತು ನೀಡಲಾಯಿತು. ಈವರೆಗೆ ಎರಡೂ ಸಂಸ್ಥೆಯಿಂದ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಮೂಲಕ 41 ದೇಶಿಯವಾಗಿ ಹಾಗೂ 6 ಮಕ್ಕಳನ್ನು ವಿದೇಶಕ್ಕೆ ದತ್ತು ನೀಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.