ADVERTISEMENT

ಮೈಸೂರು ದಸರಾ: ಮನಸೂರೆಗೊಂಡ ಗುಜರಾತ್ ಜನಪದ ನೃತ್ಯ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2025, 4:10 IST
Last Updated 26 ಸೆಪ್ಟೆಂಬರ್ 2025, 4:10 IST
ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯದ ಆವರಣದಲ್ಲಿ ದಸರಾ ಪ್ರಯುಕ್ತ ಕಾರ್ಯಕ್ರಮ ಪ್ರಸ್ತುತಪಡಿಸಿದ ಸವಿಗಾನ ಲಹರಿ ಸುಗಮ ಸಂಗೀತ ಶಾಲೆಯ ಟಿ.ರಾಜರಾಮನ್ ಮತ್ತು ತಂಡ ಹಾಗೂ ಗುಜರಾತ್ ರಾಜ್ಯದ ಜನಪದ ತಂಡ
ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯದ ಆವರಣದಲ್ಲಿ ದಸರಾ ಪ್ರಯುಕ್ತ ಕಾರ್ಯಕ್ರಮ ಪ್ರಸ್ತುತಪಡಿಸಿದ ಸವಿಗಾನ ಲಹರಿ ಸುಗಮ ಸಂಗೀತ ಶಾಲೆಯ ಟಿ.ರಾಜರಾಮನ್ ಮತ್ತು ತಂಡ ಹಾಗೂ ಗುಜರಾತ್ ರಾಜ್ಯದ ಜನಪದ ತಂಡ   

ನಂಜನಗೂಡು: ನಗರದ ಶ್ರೀಕಂಠೇಶ್ವರ ದೇವಾಲಯದ ಆವರಣದಲ್ಲಿ ದಸರಾ ಪ್ರಯುಕ್ತ ಗುರುವಾರ ಸವಿಗಾನ ಲಹರಿ ಸುಗಮ ಸಂಗೀತ ಶಾಲೆಯ ಟಿ.ರಾಜರಾಮನ್ ಮತ್ತು ತಂಡದ ಸುಗಮ ಸಂಗೀತ ಹಾಗೂ ಗುಜರಾತ್ ರಾಜ್ಯದ ತಂಡದ ಜನಪದ ನೃತ್ಯ ಪ್ರೇಕ್ಷಕರ ಮನಸೂರೆಗೊಂಡವು.

ಮೈಸೂರಿನ ವಿ.ಮೋಹನ್ ಮತ್ತು ತಂಡದವರ ನಾದಸ್ವರದ ಮೂಲಕ ಕಾರ್ಯಕ್ರಮ ಆರಂಭಗೊಂಡಿತು. ಟಿ.ರಾಜರಾಮ್ ತಂಡದ ಸುಗಮ ಸಂಗೀತ ಕಾರ್ಯಕ್ರಮದಲ್ಲಿ ಗಾಯಕರ ಸುಮಧುರ ಗಾನ ಪ್ರೇಕ್ಷಕರನ್ನು ಹಿಡಿದಿಟ್ಟಿತು. ಡಾ.ಮೊಹಿಸಿನ್ ಖಾನ್ ಅವರ ಸಿತಾರ್ ವಾದನಕ್ಕೆ ಜನರು ತಲೆದೂಗಿದರು. ಗುಜರಾತ್ ತಂಡದವರ ಜನಪದ ನೃತ್ಯಗಳು ಜನರ ಮೆಚ್ಚುಗೆಗೆ ಪಾತ್ರವಾದವು.

ನಿರೂಪಕಿ ತನುಜಾ ಕಲಾವಿದರ ಪರಿಚಯದೊಂದಿಗೆ ಸಂಗೀತ, ರೂಪಕ, ನೃತ್ಯಗಳ ಬಗ್ಗೆ ಮಾಹಿತಿ ನೀಡಿದರು. ಪ್ರಪುಲ್ಲ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಸಂಯೋಜಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.