
ಪ್ರಜಾವಾಣಿ ವಾರ್ತೆ
ಮೈಸೂರು: ಇಲ್ಲಿನ ಮೇಟಗಳ್ಳಿಯ ಮೈಕಾಸ್ ಕಾಲೇಜಿನಿಂದ ಏ.10ರಂದು ರಾಜ್ಯಮಟ್ಟದ ಬೃಹತ್ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದೆ.
‘ಹಲವು ಖಾಸಗಿ ಕಂಪನಿಗಳು ವಿವಿಧ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಿವೆ. ಬಿಕಾಂ, ಬಿಬಿಎ, ಬಿಎ, ಬಿಎಸ್‌ಡಬ್ಲ್ಯು, ಬಿ.ಎಸ್ಸಿ., ಬಿಇ, ಎಂಕಾಂ, ಎಂಬಿಎ, ಎಂಸಿಎ, ಎಂಎ, ಎಂಎಸ್‌ಡಬ್ಲ್ಯು, ಎಂ.ಎಸ್ಸಿ. ಪದವೀಧರರು ಭಾಗವಹಿಸಬಹುದು’ ಎಂದು ನಿರ್ದೇಶಕ ಜಿ. ರಾಮಚರಣ್ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ನೋಂದಣಿ ಹಾಗೂ ಮಾಹಿತಿಗೆ ಮೊ.ಸಂ. 98440 99514 ಸಂಪರ್ಕಿಸಬಹುದು ಎಂದರು.
ಪ್ರಾಂಶುಪಾಲೆ ರಮ್ಯಾ ತೆಕ್ಕಡೆ, ರಯಾನ್, ವಿಕ್ರಮ್ ಇದ್ದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.